Back to List

Kagga 470 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವಿವಿಧರಸಗಳ ಭಟ್ಟಿ, ಸೌಂದರ್ಯಕಾಮೇಷ್ಟಿ । ಕವಿಜಗತ್ಸೃಷ್ಟಿಯದು, ಕಲೆಗನಾಕೃಷ್ಟಿ ॥ ಗವಿಯೊಳಗಣ ಪ್ರಕೃತಿಯಂತ್ರ ವೈಚಿತ್ರ್ಯವದು । ತಪಸೊಂದೆ ಪಥವದಕೆ - ಮಂಕುತಿಮ್ಮ ॥ ೪೭೦ ॥

vividha rasagaLa bhaTTi, soundaryakAmEShTi । kavi jagat sRuShTiyadu, kalegana aakRuShTi ॥ gaviyoLagaNa prakRuti yantra vaichitryavadu । tapasonde pathavdake - Mankutimma ॥ 470 ॥

Meaning in Kannada

ಹಲವಾರು ರಸಗಳನ್ನು ಭಟ್ಟಿ ಇಳಿಸಿದಂತೆ ಮನಸ್ಸಿನಲ್ಲಿ ಸೌಂದರ್ಯೋಪಾಸನೆಯ ಒಂದು ಯಜ್ಞ ನಡೆಯುತ್ತದೆ. ಕವಿಯ ಕಾವ್ಯ, ಕವನ, ಕವಿತೆ ಮುಂತಾದವುಗಳಿಂದ, ಕಲಾವಿದನ ಸೃಷ್ಟಿಯಾದ ಚಿತ್ರ, ಶಿಲ್ಪ, ನೃತ್ಯ, ಗಾಯನ ಮುಂತಾದವುಗಳ ಸೆಳೆತದಿಂದ ಮತ್ತು ಮನವೆಂಬ ಗುಹೆಯಲ್ಲಿ ಸ್ವಾಭಾವಿಕವಾಗಿ ನಡೆಯುವ ಮಂಥನದಿಂದ ಭಾವರಸೋತ್ಪತ್ತಿಯಾಗಿ, ಆ ಭಾವಗಳೇ ಸೌಂದರ್ಯಾನುಭವದ ಯಜ್ಞಕ್ಕೆ ಹವಿಸ್ಸಾಗುತ್ತದೆ. ಆ ರೀತಿಯ ಅನುಭವಕ್ಕೆ ತಪಸ್ಸೊಂದೇ ಮಾರ್ಗವೆಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

Soundaryakameshti, is a metaphor for antics people do to experience beauty. It is a furnace where many different rasa (emotions, feelings) are distilled. A poet can create such a world where everything is beautiful. An artist can bring it right in front of your eyes. But it is right there in nature's secret (from with in the cave) all around us. Penance is the only way to see it. - Mankutimma

Themes

LifeMoralityNatureSocietyLove

Video Section

Video Coming Soon

Detailed video explanations by scholars and experts will be available soon.