Back to List

Kagga 469 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸೌಂದರ್ಯವೊಂದು ದೈವರಹಸ್ಯ, ಸೃಷ್ಟಿವೊಲು । ನಿಂದಿರ್ಪುದದರಾಶೆಯಿನೆ ಜೀವಿತಾಶೆ ॥ ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ । ಚೆಂದದರಿವೆ ತಪಸ್ಸೊ - ಮಂಕುತಿಮ್ಮ ॥ ೪೬೯ ॥

soundaryavondu daiva rahasya, sRuShTivolu । nindirpudu adarAsheyine jIvitAshe ॥ anduvudu kaNNigadu samskRutige takkante । chendadarive tapasso - Mankutimma ॥ 469 ॥

Meaning in Kannada

‘ಒಂದು ವಸ್ತುವು ಸುಂದರವಾಗಿ ಏಕೆ ಇದೆ?’ ಎನ್ನುವುದು ದೇವ ರಹಸ್ಯ. ಆ ಸೌಂದರ್ಯವನ್ನು ನೋಡಲು ಪಡೆಯಲು ಮತ್ತು ಅನುಭವಿಸಲು ಮಾನವನಲ್ಲಿ ಇರುವ ಬಯಕೆಯೇ ಅವನ ಬದುಕಿನಾಸೆಗೆ ಅಧಾರ. ಪ್ರತಿಯೊಂದು ವಸ್ತುವಿನ ಅಂದ ಅಥವಾ ಸೌಂದರ್ಯಾನುಭವ ಆಯಾ ವ್ಯಕ್ತಿಯ ಸಂಸ್ಕೃತಿ, ಸಂಸ್ಕಾರಗಳಿಗೆ ಅನುಗುಣವಾಗಿರುತ್ತದೆ. ಆದರೆ ಒಂದು ವಸ್ತುವಿನ ನಿಜ ಸೌಂದರ್ಯವನ್ನು ಅರಿಯುವುದೇ ತಪಸ್ಸು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The experience of beauty is divine secret, just like the secret of creation. The longing for that experience forms the base for every one's longing to live. The exact definition of a beautiful experience varies from culture to culture. To be able to recognize and experience it is itself a penance. - Mankutimma

Themes

DevotionLifeNatureSelf

Video Section

Video Coming Soon

Detailed video explanations by scholars and experts will be available soon.