Back to List

Kagga 466 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವ್ಯಸನಕಾರಣವೊಂದು ಹಸನಕಾರಣಾವೊಂದು । ರಸಗಳೀಯೆರಡಕಿಂತಾಳವಿನ್ನೊಂದು ॥ ಭೃತವಿಶ್ವಜೀವಿತಗಭೀರತೆಯ ದರ್ಶನದ । ರಸವದದ್ಭುತಮೌನ - ಮಂಕುತಿಮ್ಮ ॥ ೪೬೬ ॥

vyasanakAraNAvondu hasanakAraNAvondu । rasagaLI eraDakinta ALavinnondu ॥ bhRutavishvajIvitagabhIrateya darshanada । rasavat adbhutamauna - Mankutimma ॥ 466 ॥

Meaning in Kannada

ಈ ಜಗತ್ತಿನ ಸೌಂದರ್ಯಗಳು, ಕೆಲವರಿಗೆ ವ್ಯಸನಕ್ಕೆ ಕಾರಣವಾದರೆ,ಮತ್ತೆ ಕೆಲವು ಹರುಷಕ್ಕೆ ಕಾರಣವಾಗುತ್ತವೆ. ಆದರೆ ಈ ಎರಡೂ ರಸಗಳಿಗಿಂತ ಆಳವಾದ ಇನ್ನೊಂದು ಅನುಭವವಿದೆ. ಈ ವಿಶ್ವದ ಗಂಭೀರತೆಯ ವಿಚಿತ್ರವನ್ನು ನೋಡಿದರೆ ಮನದಲ್ಲಿ ಒಂದು ಗಾಢ ಮೌನ ಆವರಿಸುತ್ತದೆ. ಈ ಮೌನ ರಸದ ಅನುಭವ ಬಹಳ ಅದ್ಭುತ ಎಂದು ಪ್ರಕೃತಿ ಸೌಂದರ್ಯವನ್ನು ಅನುಭವಿಸುವಲ್ಲಿ ಮಾನವನ ಚಿತ್ರ ವಿಚಿತ್ರವಾದ ಪ್ರತಿಕ್ರಿಯೆಯ ಬಗ್ಗೆ ನಮಗೆ ವಿವರಿಸಿದ್ದಾರೆ ಅ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Everyday emotions are of two types – that which make us happy (laugh) or make us sad (cry). But there is one which is different from the two. It is the vision of this strange universe and the secret of life. That emotion is nothing but wonderful silence. - Mankutimma

Themes

LifeNatureLove

Video Section

Video Coming Soon

Detailed video explanations by scholars and experts will be available soon.