Mankutimmana Kagga by D.V. Gundappa
ಸ್ವರರಾಗಗೀತಿಗಳು ನಾಟ್ಯಾಭಿನೀತಿಗಳು । ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ॥ ಪರಿಪರಿಯ ಭಾವಗಳ ಗೂಢಸ್ವಭಾವಗಳ । ಪರಮೇಷ್ಠಿ ಟೀಕು ಕಲೆ - ಮಂಕುತಿಮ್ಮ ॥ ೪೬೫ ॥
svararAgagItigaLu nATya abhinItigaLu । karedu ELisuvuvu manasinali nidrisuvA ॥ paripariya bhAvagaLa gUDhasvabhAvagaLa । paramEShThi TIku kale - Mankutimma ॥ 465 ॥
ಸುಮ್ಮನಿರುವ ಅಥವಾ ಶಾಂತವಾಗಿರುವ ಮನಸ್ಸನ್ನು ಕರೆದು ಎಬ್ಬಿಸಿ ಸ್ವರ ರಾಗ ಗೀತೆಗಳ ಕೇಳುವ ಮತ್ತು ಕೇಳಿ ಆನಂದಿಸುವ, ನಾಟ್ಯ, ಅಭಿನಯ ಮುಂತಾದವುಗಳ ನೋಡುವ ಮತ್ತು ಹಾಗೆ ಕೇಳಿ ನೋಡಿದ್ದನ್ನು ಪರಿಪರಿಯಾಗಿ ಆನಂದಿಸುವ ಮಾನವನ ಹಲವಾರು ಗುಪ್ತ ಮತ್ತು ಸುಪ್ತ ಭಾವಗಳು ಆ ಪರಮಾತ್ಮನ ಸೃಷ್ಟಿಯನ್ನೇ ಟೀಕಿಸುವ ಅಥವಾ ಅಣಕವಾಡುವ ಕಲೆಯಂತೆ ಇದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Melodious songs, drama and fabulous acting can trigger emotions and innate urges that are asleep deep in our mind. Fine arts is imitating God. - Mankutimma
Video Coming Soon
Detailed video explanations by scholars and experts will be available soon.