Mankutimmana Kagga by D.V. Gundappa
ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ । ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ॥ ಗೀತೆಯಲಿ ವಿಶ್ವಜೀವನರಹಸ್ಯವನವರ್ । ಖ್ಯಾತಿಸಿಹರದು ಕಾವ್ಯ - ಮಂಕುತಿಮ್ಮ ॥ ೪೬೨ ॥
prItimahimeya chitrarItiyam vAlmIki । nItisUkShmada gahanamArgamam vyAsar ॥ gIteyali vishvajIvana rahasyavanavar । khyAtisiharadu kAvya - Mankutimma ॥ 462 ॥
ವಾಲ್ಮೀಕಿ ಮಹರ್ಷಿಯು ರಾಮಾಯಣದಲ್ಲಿ ಪ್ರೀತಿಯ ಮಹಿಮೆಯನ್ನೂ, ವ್ಯಾಸ ಮಹರ್ಷಿಯು ಮಹಾಭಾರತದಲ್ಲಿ ನೀತಿ ಸೂಕ್ಷ್ಮದ ಉನ್ನತ ವಿಚಾರಗಳನ್ನೂ, ಭಗವಾನ್ ಶ್ರೀ ಕೃಷ್ಣ ‘ಭಗವದ್ಗೀತೆ’ಯಲ್ಲಿ ಬದುಕಿನ ರಹಸ್ಯವನ್ನೂ ತೋರಿ ಜಗತ್ತಿನಲ್ಲಿರುವ ‘ಪ್ರೀತಿ, ನೀತಿ ಮತ್ತು ಜೀವನ’ದ ಸೌಂದರ್ಯವನ್ನು ಕಾವ್ಯರೂಪದಲ್ಲಿ ನೀಡಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Valmiki has painted a very beautiful picture depicting magnanimity of love in Ramayana. In Mahabharata, Vyasa has shown us the intricate subtleties of various hues of morality. In the Bhagavadgita, he has revealed the secret of life in this world. That is the reason why these poems are famous. - Mankutimma
Video Coming Soon
Detailed video explanations by scholars and experts will be available soon.