Back to List

Kagga 463 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ । ಪದ ಚರ್ಚೆ ಮಿತವಿಚಾರಕೆ ತಕ್ಕ ಭಾಷೆ ॥ ಹೃದಯಮತಿ ಸತಿಪತಿಗಳಂತಿರಲು ಯುಕ್ತವದು । ಬದುಕು ರಸತರ್ಕೈಕ್ಯ - ಮಂಕುತಿಮ್ಮ ॥ ೪೬೩ ॥

hRudayake oppuva bhAShe rAgalaya vistAra । pada charche mitavichArake takka bhAShe ॥ hRudaya mati satipatigaLante iralu yuktavadu । baduku rasa tarka aikya - Mankutimma ॥ 463 ॥

Meaning in Kannada

ಹೃದಯಕ್ಕೆ ಮುದನೀಡುವುದು ಸಂಗೀತ, ಕಲೆ, ಪ್ರಕೃತಿ ಮುಂತಾದವು ಅಗತ್ಯ . ತಮ್ಮ ತಮ್ಮ ಅಭಿಪ್ರಾಯವನ್ನು ಸಿದ್ಧಪಡಿಸಲು ಚರ್ಚೆಗೆ ವಾಗ್ಜರಿ ಬೇಕು. ಹೃದಯ ಮತ್ತು ಬುದ್ಧಿ ಎರಡೂ ಗಂಡ-ಹೆಂಡಿರಂತಿರಲು ಬದುಕಿನಲ್ಲಿ ರಸಾನುಭವ ಮತ್ತು ತರ್ಕದ ಐಕ್ಯತೆಯನ್ನು ಕಂಡರೆ ಬದುಕು ಸುಂದರವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The language that the heart understands is that of emotions. Discussions and words are good for conveying ideas or arguments. It is apt that the heart and mind must be like husband and wife. Life is happy when emotions and logic are both in present in right proportions. - Mankutimma

Themes

WisdomLifeMoralityLove

Video Section

Video Coming Soon

Detailed video explanations by scholars and experts will be available soon.