Mankutimmana Kagga by D.V. Gundappa
ರಾಮನುಂ ಭರತನುಂ ತಬ್ಬಿಕೊಂಡತ್ತಂದು । ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು ॥ ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ । ಕ್ಷೇಮವದು ಜೀವಕ್ಕೆ - ಮಂಕುತಿಮ್ಮ ॥ ೪೬೧ ॥
rAmanum bharatanum tabbikoNDattandu । prEmAshru ukki nadiyAgi paridandu ॥ sImeyam muTTitala bAndhavyasaundarya । kShEmavadu jIvakke - Mankutimma ॥ 461 ॥
ರಾಮನು ಭರತನನ್ನು ಗಾಢವಾಗಿ ತಬ್ಬಿಕೊಂಡು ಅತ್ತ ದಿನ ಅವರಿಬ್ಬರಲ್ಲೂ ಪ್ರೇಮಾಶ್ರುವು ಉಕ್ಕಿ ನದಿಯಾಗಿ ಹರಿದು ಭಾವ ಸೌಂದರ್ಯದ ಗರಿಮೆಯನ್ನು ಮುಟ್ಟಿದಂತೆ, ಪ್ರತೀ ಜೀವಿಯೂ ಭಾವ ಸೌಂದರ್ಯದಲ್ಲಿ ಮೆರೆದರೆ ಅದು ಜೀವಕ್ಕೆ ಹಿತ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
When Rama and Bharatha met and hugged each other, tears of love rolled like a torrent. Such was their emotions which crossed all limits of love and beauty. Once in a while letting our emotions flow like this is good for life. – Mankutimma [Translator's note: Bharatha loved his brother Rama very much and still cited as exemplary example of brotherly love. Due to certain circumstances, Rama had to go on exile. Bharatha visited Rama twice during the exile (Panchavati and Nandigrama) and both times the meeting is described in Ramayana to be very emotional]
Video Coming Soon
Detailed video explanations by scholars and experts will be available soon.