Back to List

Kagga 460 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ । ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ॥ ಗಗನದೊಳನಂತದರ್ಶನದೆ ಮುಕ್ತಿಯನೊಂದು । ನಗುನಗಿಸಿ ಲೋಕವನು - ಮಂಕುತಿಮ್ಮ ॥ ೪೬೦ ॥

jagada bandIgRuhadi bigyutire vidhi ninna । nigama satkale kAvyagaLa gavAkShagaLim ॥ gaganadoLanantadarshanade muktiyanondu । nagunagisilOkavanu - Mankutimma ॥ 460 ॥

Meaning in Kannada

ವಿಧಿಯು ನಿನ್ನನ್ನು ಈ ಜಗತ್ತಿನ ಬಂದೀಖಾನೆಯಲ್ಲಿ ಸೆರೆಯಾಳಾಗಿಸಿರುವಾಗ,ಬಂದೀಖಾನೆಯ ಸೂರಿನಲ್ಲಿರುವ ಕಿಟಕಿಗಳಿಂದ ಆಕಾಶದ ಅನಂತ ದರ್ಶನದಿಂದ, ವೇದ, ಕಲೆ ಕಾವ್ಯಗಳಂತಹ ವಿಚಾರಗಳನ್ನು ಅರಿತು, ಈ ಜಗತ್ತಿನಲ್ಲಿ ಅನಂದವನ್ನು ಪಡೆದು ನಕ್ಕು ನಲಿದು, ಪರರನ್ನೂ ನಗಿಸಿ, ಮುಕ್ತಿಯನು ಹೊಂದು ಎಂದು ಅಪ್ಪಣೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

Providence locks you up in the prison of this world. There are windows that let you see outside – scriptures, fine arts and literature. Look through those windows towards the sky experience the infinite. That is the way to liberate yourself. While doing so, you should make sure you make the rest of the world happy also. - Mankutimma

Themes

LifeNatureSelfWarPeace

Video Section

Video Coming Soon

Detailed video explanations by scholars and experts will be available soon.