Back to List

Kagga 459 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೃದಯಪುಷ್ಪಮರಂದವಾತ್ಮಕೆ ನಿಜಾನಂದ । ಉದಿಪುದಾ ರಸ ಸುಂದರದ ಕಿರಣ ಸೋಕೆ ॥ ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ । ಪುದಿದಿರ್ಪ ಕಾಂತಿಯದು - ಮಂಕುತಿಮ್ಮ ॥ ೪೫೯ ॥

hRudayapuShpamarandavAtmake nijAnanda । udipudA rasa sundarada kiraNa sOke ॥ badukinoL kaviteyoL kalegaLoL prakRutiyoL । pudidirpa kAntiyadu - Mankutimma ॥ 459 ॥

Meaning in Kannada

ಸೌಂದರ್ಯದ ಕಿರಣ ನಮ್ಮನ್ನು ಸೋಕಿದೊಡನೆ ತತ್ಸಂಬಂಧವಾದ ‘ರಸ’ ನಮ್ಮ ಮನಸ್ಸಿನಲ್ಲಿ ಉಕ್ಕಿ ಹೃದಯದ ಅನುಭವಕ್ಕೆ ಬಂದಾಗ, ಆತ್ಮವು ನಿಜಾನಂದವನ್ನು ಪಡೆಯುವುದು. ಬದುಕಿನಲ್ಲಿ, ಕವಿತೆ, ಕಲೆ ಮತ್ತು ಪ್ರಕೃತಿಗಳಲ್ಲಿ ಅಂತಹ ಅನಂದವನ್ನು ನೀಡುವ ಕಾಂತಿ ಅಡಗಿದೆ ಎಂದು ನಿಜಾನಂದಾನುಭೂತಿಯ ವಿಚಾರವನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

The heart has the nectar which makes the soul truly happy. When the eyes see a beautiful scene, it fills the heart with that beauty (and satisfaction). That brilliance is present in life, in poetry, in fine arts and nature. - Mankutimma

Themes

LifeNatureLovePeace

Video Section

Video Coming Soon

Detailed video explanations by scholars and experts will be available soon.