Mankutimmana Kagga by D.V. Gundappa
ಹಿಂದಣದರುಳಿವಿರದು, ಮುಂದಣದರುಸಿರಿರದು । ಒಂದರೆಕ್ಷಣ ತುಂಬಿ ತೋರುವುದನಂತ ॥ ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ । ಸುಂದರದ ಲೋಕವದು - ಮಂಕುತಿಮ್ಮ ॥ ೪೫೮ ॥
hindaNadaruLiviradu, mundaNadarusiriradu । ondarekShaNa tumbi tOruvudananta ॥ onde kaNNonde guriyonde maimanamareta । sundarada lOkavadu - Mankutimma ॥ 458 ॥
ಹಿಂದಿನದರ ಉಳಿವಿರದು, ಮುಂದಿನಿದರ ಸುಳಿವಿರದು, ರಸಾಸ್ವಾಧನೆಮಾಡುವಾಗ, ನೋಟ ಗಮನ ಎಲ್ಲದರೊಳಗೂ ಒಂದು ಘಳಿಗೆ ಆ ರಸದ ಅನುಭವವೇ ತುಂಬಿ ಮೈ ಮನವನ್ನು ಮರೆತಂತೆ ಆಗುತ್ತದೆ ಮತ್ತು ಅಲ್ಲಿರುವಾಗ ಅದೊಂದು ಸುಂದರ ಲೋಕದಂತೆ ಕಾಣುತ್ತದೆ ಎಂದು ರಸಾಸ್ವಾಧನೆಯ ಮಾರ್ಗವನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು.
In the moment of enlightenment, there is no memory of the past. There is no anxiety for the future. That fraction of second is filed with all the excitement of eternity. In that beautiful vision, there is unity of what we see, where we want to go, the body and soul. -Mankutimma
Video Coming Soon
Detailed video explanations by scholars and experts will be available soon.