Mankutimmana Kagga by D.V. Gundappa
ಚಾರುದೃಶ್ಯಂಗಳಿಂ ಪ್ರೀತಿ ಹೃದಯವಿಕಾಸ । ಕ್ರೂರದೌಷ್ಟ್ಯಂಗಳಿಂ ವೀರಾನುಕಂಪ ॥ ಭೈರವಾದ್ಭುತಗಳಿಂ ಮೌನದಂತರ್ಮನನ । ದಾರಿಯುದ್ಧಾರಕಿವು - ಮಂಕುತಿಮ್ಮ ॥ ೪೫೭ ॥
chArudRushyangaLim prIti hRudayavikAsa । krUradauShTyaNgaLim vIrAnukampa ॥ bhairavAdbhutagaLim maunadantarmanana । dAriyuddhArakivu - Mankutimma ॥ 457 ॥
ಒಳ್ಳೆಯ ಸುಂದರವಾದ ದೃಶ್ಯಗಳನ್ನು ನೋಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಕ್ರೌರ್ಯ ಮತ್ತು ದುಷ್ಟತನವನ್ನು ನೋಡಿದರೆ, ಮನದಲ್ಲಿ ವೀರಾವೇಶ ಉಕ್ಕುತ್ತದೆ ಅಥವಾ ಅನುಕಂಪ ಉಂಟಾಗುತ್ತದೆ. ಭೀಕರ ಅಥವಾ ಅದ್ಭುತಗಳನ್ನು ಕಂಡಾಗ ಅಂತರ್ಮನ ಮೌನ ತಳೆದು ಚಿಂತನೆಗೊಳಗಾಗುತ್ತದೆ. ಈ ರೀತಿಯ ಅನುಭವಗಳು ಮಾನವನ ಉದ್ಧಾರಕ್ಕೆ ಮಾರ್ಗಗಳು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.
When one sees beautiful scenes his heart expands with love. If we see oppression and tyranny, it creates anger(towards oppressor) and compassion together (towards victim). These extreme stimuli range from scary to magnificent and make us contemplate in peace. These are the ways for one’s enrichment - Mankutimma
Video Coming Soon
Detailed video explanations by scholars and experts will be available soon.