Back to List

Kagga 456 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ । ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ॥ ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ- । ನಡರೆನ್ನುವುದು ಶಾಂತಿ - ಮಂಕುತಿಮ್ಮ ॥ ೪೫೬ ॥

piDi gaLisu bhujisoDeyanAgennuvudu mOha । koDu salisu sEvegaiyennuvudu karuNe ॥ biDu nInu nAnugaLa, vishvAtmapadavanI- । naDarennuvudu shAnti - Mankutimma ॥ 456 ॥

Meaning in Kannada

ಹಿಡಿ, ಗಳಿಸು, ಅನುಭವಿಸು, ಒಡೆಯನಾಗು ಎಂದು ‘ಮೋಹ’ ನಮ್ಮನ್ನು ಪ್ರೇರೇಪಿಸುತ್ತದೆ. ‘ಕರುಣೆ’ ಕೊಡು, ಸಲ್ಲಿಸು, ಸೇವೆಮಾಡು, ಎನ್ನುವ ಭಾವಗಳನ್ನು ಮನದಲ್ಲಿ ಮೂಡಿಸುತ್ತದೆ. ನೀನು ಮತ್ತು ನಾವು ಎನ್ನುವ ಭೇದವನ್ನು ತೊರೆದು ವಿಶ್ವಾತ್ಮಭಾವವನ್ನು ಪಡೆ ಎಂದು ‘ಶಾಂತಿ’ ಭೋದಿಸುತ್ತದೆ ಎಂದು, ಮೋಹ ಕರುಣೆ ಮತ್ತು ಶಾಂತಿಯ ಸ್ವಭಾವಗಳನ್ನು ವಿಸ್ತರಿಸಿ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

One of the three emotions is attachment. It tells man to earn (even little), spend and enjoy it and become owner of stuff. Compassion tells him to give, submit and serve. Peace tells him to erase all barriers between me and you. It urges you to lift yourself to the consciousness of the universal soul. - Mankutimma

Themes

DeathSelfLovePeace

Video Section

Video Coming Soon

Detailed video explanations by scholars and experts will be available soon.