Back to List

Kagga 455 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸುಂದರದ ರಸ ನೂರು; ಸಾರವದರೊಳು ಮೂರು । ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ॥ ಒಂದರಿಂದೊಂದು ಬೆಳೆಯಾದಂದು ಜೀವನವು । ಚೆಂದಗೊಂಡುಜ್ಜುಗವೊ - ಮಂಕುತಿಮ್ಮ ॥ ೪೫೫ ॥

sundarada rasa nUru; sAravadaroLu mUru । hondippuvavu mOha karuNe shAntigaLa ॥ ondarindondu beLeyAdandu jIvanavu । chendagonDujjugavo - Mankutimma ॥ 455 ॥

Meaning in Kannada

ಜಗತ್ತಿನ ವಸ್ತುಗಳಲ್ಲಿನ ನೂರಾರು ‘ರಸ’ಗಳಲ್ಲಿ ‘ಸಾರ’ವಿರುವುದು ಮೂರು . ಅವೇ ‘ ಮೋಹ, ಕರುಣೆ ಮತ್ತು ಶಾಂತಿ’. ಈ ಮೂರೂ ಸಾರಗಳು ಒಂದಕ್ಕೊಂದು ಪೂರಕವಾಗಿದ್ದು ಒಂದು ಮತ್ತೊಂದರ ಬೆಳವಣಿಗೆಗೆ ಮೂಲವಾದರೆ ನಮ್ಮ ಜೀವನವು ಚೆಂದಗೊಳ್ಳುತದೆ ಎಂದು ಸಾರಯುಕ್ತವಾದ ಬದುಕಿನ ಪರಿಚಯವನ್ನು ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಮಾಡಿದ್ದಾರೆ.

Meaning & Interpretation

There are hundreds of emotions in this world. Only three of them are very strong - attachment, compassion and peace. If these three emotions enhance one another, then life becomes beautiful. One must start feeling attached to everything (comes from love). This attachment should lead to compassion towards all. This automatically puts your mind at ease and find peace. Once peaceful, it helps person to love more. - Mankutimma

Themes

LifeSocietyLoveWarPeace

Video Section

Video Coming Soon

Detailed video explanations by scholars and experts will be available soon.