Back to List

Kagga 450 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ । ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ॥ ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ । ಬಂಧಮೋಚನ ನಿನಗೆ - ಮಂಕುತಿಮ್ಮ ॥ ೪೫೦ ॥

saundaryadoL dvandva, bAndhavyadoL dvandva । dvandvavI lOka sahavAsagaLoLella ॥ munde nInAvubhayagaLa dATi sAgutire । bandhamOchana ninage - Mankutimma ॥ 450 ॥

Meaning in Kannada

ಈ ಜಗತ್ತಿನಲ್ಲಿರುವ ಎಲ್ಲ ಸೌಂದರ್ಯ ಮತ್ತು ಬಾಂಧವ್ಯಗಳಲ್ಲಿ ದ್ವಂದ್ವಗಳಿವೆ. ಈ ಜಗತ್ತಿನ ಸಹವಾಸವೆಂದರೆ, ದ್ವಂದ್ವದಲ್ಲಿ ಬಿದ್ದೆವು ಎಂದರ್ಥ. ಎಂದು ನಾವು ಈ ದ್ವಂದ್ವಗಳನ್ನು ಮೀರಿ ಮುಂದೆ ಹೋಗುತ್ತೇವೆಯೋ ಅಂದೇ ನಮಗೆ ಬಂಧ ವಿಮೋಚನೆ ಎಂದು ಸುಂದರ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

There is duality in beauty. There is duality in relations of life. There is duality in the whole web of life. Going forward, if you can surpass the duality and see the unity in each one of them then you will liberated. - Mankutimma

Themes

LifeSocietyWar

Video Section

Video Coming Soon

Detailed video explanations by scholars and experts will be available soon.