Mankutimmana Kagga by D.V. Gundappa
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ । ಶೈಲದಚಲತೆಯಿರಲು ಝರಿಯ ವೇಗ ಸೊಗ ॥ ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಭು । ವೈಲಕ್ಷಣದೆ ಚೆಂದ - ಮಂಕುತಿಮ್ಮ ॥ ೪೫೧ ॥
nIla vistaraviralu nakShatra bindu soga । shailada achalate iralu jhariya vEga soga ॥ bALu bayalantiralu maneyacchukaTTimbhu । vailakShaNadechenda - Mankutimma ॥ 451 ॥
ವಿಶಾಲವಾದ ಅಕಾಶವಿರಲು ಅಲ್ಲಿ ಹರಡಿರುವ ನಕ್ಷತ್ರ ಸಮೂಹ ಚೆಂದ, ಅಲುಗಾಡದೆ ನಿಂತಿರುವ ಬೆಟ್ಟಗಳಿರುವಾಗ ಅಲ್ಲಿಂದ ಹರಿವ ನೇರ ಜಲಪಾತ ನೋಡಲು ಚೆಂದ, ಬದುಕು ಬಯಲಂತೆ ಇರಲು ನಾವಿರುವ ಮನೆಯೇ ನಮಗೆ ಸೊಗಸು, ಹಿತ. ಹೀಗೆ ವಿಭಿನ್ನತೆಯಿಂದ ಕೂಡಿದ ಜಗತ್ತೇ ನಮಗೆ ಚೆಂದವಾಗಿ ಕಾಣುತ್ತದೆ ಎಂದು ಮಾನ್ಯ ಗುಂಡಪ್ಪನವರು ಉಲ್ಲೇಖ ಮಾಡಿದ್ದಾರೆ ಈ ಮುಕ್ತಕದಲ್ಲಿ.
The twinkling star looks beautiful because of the vast expanse of the sky (emptiness). The flowing water of the stream is beautiful because the rocks on which it flows are stationary. The safety of the home is so meaningful because life is like being in open ground. Things are mostly beautiful because they are contrasted with their opposites. - Mankutimma
Video Coming Soon
Detailed video explanations by scholars and experts will be available soon.