Mankutimmana Kagga by D.V. Gundappa
ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ । ದ್ವಂದ್ವದೊಳಗನುವು; ಅದು ಪರಿಮಾಣದುಚಿತ ॥ ಸಂಧಾನರೀತಿಯದು; ಸಹಕಾರ ನೀತಿಯದು । ಸಂದರ್ಭಸಹಜತೆಯೊ - ಮಂಕುತಿಮ್ಮ ॥ ೪೪೯ ॥
saundaryadAlaya bari dvandvavEnalla । dvandvadoLaganuvu; adu parimANaduchita ॥ sandhAnarItiyadu, sahakAra nItiyadu । sandarbhasahajateyo - Mankutimma ॥ 449 ॥
ಕೇವಲ ದ್ವಂದ್ವಗಳು ಇದ್ದರೆ ಸಾಲದು, ಅವು ಒಂದಕ್ಕೊಂದು ಅನುಗುಣವಾಗಿರಬೇಕು, ಪರಿಮಾಣಗಳ ಔಚಿತ್ಯವನ್ನು ಹೊಂದಿರಬೇಕು, ಒಂದಕ್ಕೊಂದು ಸಮರ್ಪಕವಾಗಿ ಅನುಸಂಧಾನದಿಂದಿರಬೇಕು ಮತ್ತು ಪರಸ್ಪರ ಸಹಕಾರಯುತವಾಗಿರಬೇಕು. ಈ ಎಲ್ಲ ರೀತಿಯ ಸಂದರ್ಭಗಳು ಇದ್ದಾಗ ಅದು ನಿಜವಾದ ಸೌಂದರ್ಯ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Beauty does not exist in the mere presence of the opposites. They have to be well coordinated. They have to be mixed in right proportions. This is the rule of compromise. This is the rule of cooperation. This is what comes out as 'natural' in life situations. - Mankutimma
Video Coming Soon
Detailed video explanations by scholars and experts will be available soon.