Mankutimmana Kagga by D.V. Gundappa
ಬಿಂದು ವಿಸರಗಳನುವು, ವಂಕು ಸರಲಗಳನುವು । ಚೆಂದ ಕಣ್ಣಿಗೆ ವರ್ಣವಿವಿಧಂಗಳನುವು ॥ ಚೆಂದ ವೇಗ ಸ್ತಿಮಿತದನುವು, ಹುಳಿಯುಪ್ಪನುವು । ದ್ವಂದ್ವದನುವುಗಳಂದೆ - ಮಂಕುತಿಮ್ಮ ॥ ೪೪೮ ॥
bindu visaragaLa anuvu, vanku saralagaLa anuvu । chenda kaNNige varNavividhaMgaLa anuvu ॥ chenda vEga stimitada anuvu, huLiyuppa anuvu । dvandvadanuvugaLande - Mankutimma ॥ 448 ॥
ಸೃಷ್ಟಿಯಲ್ಲಿ ಹಲವಾರು ದ್ವಂದ್ವಗಳು ಜೊತೆಜೊತೆಯಲ್ಲೇ ಇರುತ್ತವೆ. ಒಂದು ಚುಕ್ಕೆಯ ಸುತ್ತ ವಿಸ್ತಾರ, ಅಂಕುಡೊಂಕುಗಳೊಡನೆ ನೇರಗಳು, ಒಂದಕ್ಕೊಂದು ಹೊಂದಿಕೊಂಡು ಹಲವಾರಾದರೂ, ನಮ್ಮ ಕಣ್ಣಿಗೆ ಚೆಂದವಾಗಿ ಕಾಣುವ ವಿವಿಧ ಬಣ್ಣಗಳು, ಕೆಲವು ಸ್ಥಾಯೀಯಾಗಿರುವುದು ಮತ್ತೆ ಕೆಲವು ವೇಗವಾಗಿ ಓಡುತ್ತಿರುವುದು, ಹೀಗೆ ಪರಸ್ಪರ ವಿರುದ್ಧವಾಗಿದ್ದರೂ ಅಕ್ಕ ಪಕ್ಕಗಳಲ್ಲೇ ಇರುವ ಈ ದ್ವಂದ್ವಗಳ ಪರಸ್ಪರ ಅನ್ಯೋನ್ಯತೆ ಈ ಜಗತ್ತನ್ನು ಇನ್ನಷ್ಟು ಸುಂದರವಾಗಿಸಿದೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Beauty comes from coordination of the opposites. A point and an expanse, a bent stroke right next to a straight one, a mixture of colors pleasing to the eye, fast moving and stationary objects, food with sour and salts and so on. - Mankutimma
Video Coming Soon
Detailed video explanations by scholars and experts will be available soon.