Mankutimmana Kagga by D.V. Gundappa
ದೃಷ್ಟಿಚುಕ್ಕೆಯದೊಂದನೆಲ್ಲ ಚೆಂದಂಗಳ್ಗ- । ಮಿಟ್ಟಿಹನು ಪರಮೇಷ್ಠಿ, ಶಶಿಗೆ ಮಶಿಯವೊಲು ॥ ಗುಟ್ಟೇನೊ? ರಕ್ಷೆಯೋ? ಸಿಂಗರವೊ? ಹೇಳನವೊ? । ಮಷ್ಟು ಸೃಷ್ಟಿಗೆ ಬೊಟ್ಟು - ಮಂಕುತಿಮ್ಮ ॥ ೪೪೭ ॥
dRuShTi chukkeyu adondanu ella chendangaLgam । ittihanu paramEShThi, shashige mashiyavolu ॥ guTTEno? rakSheyo? singaravo? hELanavo? । maShTu sRuShTige boTTu - Mankutimma ॥ 447 ॥
ಸೃಷ್ಟಿಕರ್ತ, ತನ್ನ ಸೃಷ್ಟಿಯಲ್ಲಿನ ಚೆಂದಗಳಿಗೆಲ್ಲಾ ಒಂದು ದೃಷ್ಟಿಚುಕ್ಕೆಯನ್ನು ಇಟ್ಟಿದಾನೆ, ಚಂದ್ರನಲ್ಲಿ ಕಲೆಗಳಂತೆ. ಇದರ ಗುಟ್ಟು ಏನಿರಬಹುದು ಎಂದು ಒಂದು ಪ್ರಶ್ನೆ ಕೇಳುತ್ತಾ, ಹಾಗೆ ಕಲೆಗಳನ್ನು ಇಟ್ಟು ಅದನ್ನು ‘ ಇನ್ನೂ ಅಧಿಕ ಸಿಂಗಾರಕ್ಕೊ,ಕಾಪಾಡುವುದಕ್ಕಾಗಿಯೋ, ಅಥವಾ ಹಳಿಯಲೋ,’ ಎಂದು ಸೂಚಿಸುತ್ತಾ, ಏನಾದರಾಗಲಿ ಕೊಳೆ ಈ ಜಗತ್ತಿನ ಸೌಂದರ್ಯಕ್ಕೆ ಇಟ್ಟ ದೃಷ್ಟಿಬೊಟ್ಟು ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
God has kept one black-dot in all beautiful things. Just like the black-dot on the moon. Is it a secret plan? Is it for protection? Is it for decoration? Is it just for fun? There is also ugliness in nature serving as a black-dot in an otherwise beautiful creation. - Mankutimma [Translator's note: In Indian households, a black-dot is kept on the face of little kids after decorating so that it can absorb all the ill-effects of being the source of all jealousy. Whenever there is absolute beauty, it is made imperfect using a black-dot.]
Video Coming Soon
Detailed video explanations by scholars and experts will be available soon.