Back to List

Kagga 446 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- । ನಂದದೊಳಮರುಮವೇಂ? ವಿಶ್ವಚೇತನದಾ ॥ ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ । ಬಂಧುರತೆ ಬೊಮ್ಮನದು - ಮಂಕುತಿಮ್ಮ ॥ ೪೪೬ ॥

sundarate enuvudEm? janake maimareyipa । Anandada oLa marumavEm? vishvachEtanadA ॥ spandanave saundaryam aduve jIvanamUla । bandhurate bommanadu - Mankutimma ॥ 446 ॥

Meaning in Kannada

" ಸುಂದರತೆ ಎಂದರೆ ಏನು? ಜಗತ್ತಿನ ಸೃಷ್ಟಿಯು ಎಲ್ಲವೂ ಅದನ್ನು ಕಂಡು ಮೈ ಮರೆಯುವಂತೆ ಮಾಡುವ ಆ ಒಳಗುಟ್ಟು ಏನು?" ಎಂದರೆ ಪರಮ ಚೇತನಕ್ಕೆ ಜಗತ್ತಿನ ಸೃಷ್ಟಿಯೆಲ್ಲವೂ ಪ್ರತಿಸ್ಪಂದಿಸುವಂತೆ ಮಾಡುವುದೇ ಈ ಸುಂದರತೆ. ಪರಮಾತ್ಮ ಸೃಷ್ಟಿಯಾದ ಈ ಜಗಜ್ಜೀವಜಾಲದ ಪರಸ್ಪರ ಆಕರ್ಷಣೆಗೆ ಈ ಸುಂದರತೆಯೇ ಕಾರಣ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

What is it to feel 'beautiful'? What is the secret of happiness that makes people forget themselves? Being conscious of the whole world and empathizing with it is being beautiful. That is the source of life. That is the connection between a man and the Creator. - Mankutimma

Themes

LifeSociety

Video Section

Video Coming Soon

Detailed video explanations by scholars and experts will be available soon.