Back to List

Kagga 445 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕ್ಷಣವದೊಂದೆ ಅನಂತಕಾಲ ತಾನಾಗುವುದು । ಅನುಭವಕೆ ಸತ್ತ್ವ ಶಿವ ಸುಂದರಗಳಮರೆ ॥ ಮನ ತುಂಬುಶಶಿಯಾಗಿ, ನೆನಪಮೃತವಾಗುವುದು । ಕ್ಷಣದೊಳಕ್ಷಯ ಕಾಣೊ - ಮಂಕುತಿಮ್ಮ ॥ ೪೪೫ ॥

kshaNadonde anantakAla tAnAguvudu । anubhavake sattva shiva sundaragaL amare ॥ mana tumbushashiyagi, nenapu amRutavAguvudu । kShaNadoLakshaya kANo - Mankutimma ॥ 445 ॥

Meaning in Kannada

ಒಂದೊಂದು ಕ್ಷಣವೇ ಅನಂತಕಾಲವಾಗಿರುವಾಗ ನಮ್ಮ ಅನುಭವಕ್ಕೆ ಸುಂದರವಾದ ಶಿವಸ್ವರೂಪದ ಸತ್ವವು ಬಂದರೆ, ಮನವು ಚಂದ್ರ ಬೆಳಕಿನಂತೆ ತಣ್ಣಗಿದ್ದರೆ ನಮ್ಮ ನೆನಪುಗಳೆಲ್ಲಾ ಸವಿಯಾದ ಅಮೃತದಂತೆ ಆಗುವುವು. ಹಾಗಾಗಿ ಪ್ರತೀ ಕ್ಷಣದಲ್ಲೂ ಎಂದೂ ಕರಗದ ಅಮೃತ ಭಾವವನ್ನು ಕಾಣು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಮುಕ್ತಕದಲ್ಲಿ.

Meaning & Interpretation

When our experience is filled with truth, purity and beauty then that fleeting second seems like eternity. Mind gets filled with calmness (of the moon). Our memory of that second will be like elixir. See infinity in that second. - Mankutimma

Themes

WisdomLifePeace

Video Section

Video Coming Soon

Detailed video explanations by scholars and experts will be available soon.