Back to List

Kagga 444 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಾಂದಳದ ಬಾಗು, ರವಿಕಿರಣಗಳ ನೀಳ್ಕೋಲು । ಇಂದುಮಣಿನುಣ್ಪು, ತಾರೆಗಳ ಕಣ್ಮಿನುಗು ॥ ಚೆಂದದಂಗಾಂಗಭಾವದಿ ಮೊದಲ ಪಾಠವಿವು । ಸೌಂದರ್ಯಗುರು ಪ್ರಕೃತಿ - ಮಂಕುತಿಮ್ಮ ॥ ೪೪೪ ॥

bAndaLada bAgu, ravikiraNagaLa nILkOlu । indumaNinuNpu, tAregaLa kaN minugu ॥ chendada angAngabhAvadi modala pAThavu । saundarya guru prakRuti - Mankutimma ॥ 444 ॥

Meaning in Kannada

ಕ್ಷಿತಿಜದಲ್ಲಿ ನಮಗೆ ಕಾಣುವ ಆ ಬಾಗಿದಂತಹ ಆಕಾಶ, ನೇರವಾಗಿ ಭೂಮಿಯ ಮೇಲೆ ಇಳಿಯುವ ಸೂರ್ಯನ ಕಿರಣಗಳು, ತಂಪಾದ ಚಂದ್ರ, ಫಳಫಳನೆ ಹೊಳೆಯುವ ಮುಗಿಲ ನಕ್ಷತ್ರಗಳ ಹೊಳಪು ಇತ್ಯಾದಿಗಳು ಪ್ರಕೃತಿಯಲ್ಲಿ ಚೆಂದವಾಗಿ ಕಾಣುವ ಆ ಸೌಂದರ್ಯಗಳೆಲ್ಲಾ, ಪ್ರಕೃತಿಯು ನಮಗೆ ನೀಡುವ ಸುಂದರತೆಯ ಮೊದಲ ಪಾಠದಂತಿದೆ ಎಂದು ಮೂಲ ಸೌಂದರ್ಯವನ್ನು ನಮಗೆ ಅರುಹುತ್ತಾರೆ, ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

The beautiful bend of the sky (at horizon), the straight rays of the Sun, the pleasant rays of moonlight, the twinkle of the stars - these are the first lessons of experiencing beauty. This is what leads to people's perception of beauty in human form. Nature is the first teacher of experiencing beauty. - Mankutimma

Themes

DeathNatureSociety

Video Section

Video Coming Soon

Detailed video explanations by scholars and experts will be available soon.