Mankutimmana Kagga by D.V. Gundappa
ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ । ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ ॥ ಪೊಂಗುವಾನಂದವದನನುಭವಿಸಿದವನ್ ಅಜನ । ಹಂಗಿಪನೆ ಕೃಪಣತೆಗೆ? - ಮಂಕುತಿಮ್ಮ ॥ ೪೪೩ ॥
tingaLu Arara duDdita chengulAbiya beLeta । kangoLipudu adara siri aregaLige alar oL ॥ ponguva Anandavanu anubhavisidan ajana । hangipane kRupaNatege? - Mankutimma ॥ 443 ॥
ಆರು ತಿಂಗಳ ಸತತ ದುಡಿತದಿಂದ ಬೆಳೆಸಿದ ಒಂದು ಗುಲಾಬಿ ಗಿಡ ತನ್ನ ಸಿರಿತನವನ್ನು ತನ್ನಲ್ಲಿ ಬಿಡುವ ಮೊದಲ ಹೂವಿನಲ್ಲಿ ಪ್ರಕಟಗೊಳಿಸುತ್ತದೆ. ಅದರ ಅಂದ ಚೆಂದಗಳು ಒಂದು ದಿನವಿದ್ದು ಬಾಡಿಹೋಗುತ್ತದೆ. ಹಾಗೆ ಆ ಗಿಡದಲ್ಲಿ ಹೂವಿನ ರೂಪದಲ್ಲಿ ಉಕ್ಕುವ ಆನಂದವನ್ನು, ನೋಡಿ ಸಂತಸಪಡದವನು, ಆ ಹೂವನ್ನು ಅರೆಗಳಿಗೆಯ ಸಂತೋಷಕ್ಕೆ ಸೃಷ್ಟಿಸಿದ ಆ ಸೃಷ್ಟಿಕರ್ತನ ಜಿಪುಣತನವನ್ನು ಹಳಿದರೇನು ಪ್ರಯೋಜನ ಎಂದು ಜಗತ್ಸೃಷ್ಟಿಯನ್ನು ಮತ್ತು ಅದರಲ್ಲಿನ ಸಂತೋಷವನ್ನು ಅನುಭವಿಸುವ ಪರಿಯ ಬಗ್ಗೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Six months of effort is required for a rose plant to flower. After that, the flower displays its beauty only for a small time. This beauty emanates a wave of happiness even though it is short lived. Does a person who experiences such happiness crib that the creator is a big miser (for not extending that pleasure for longer)? - Mankutimma
Video Coming Soon
Detailed video explanations by scholars and experts will be available soon.