Mankutimmana Kagga by D.V. Gundappa
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? । ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೆ? ॥ ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು । ಮೊಗವ ತಿದ್ದುವರೆಲ್ಲ - ಮಂಕುತಿಮ್ಮ ॥ ೪೪೨ ॥
sogasu bEDada naraprANi ellihudu ayya? । maguve, mudukane, purANika purOhitare? ॥ jagada kaNNu iNikadeDe mukurada eduroLu nintu । mogava tidduvaru ella - Mankutimma ॥ 442 ॥
ಸೊಗಸು ಅಂದರೆ ಅಂದ ಚೆಂದವನ್ನು ಬೇಡದ ಮನುಷ್ಯರು ಎಲ್ಲಿಹರು? ಮಗುವಿನಿಂದ ಹಿಡಿದು ಮುದುಕನತನಕ, ಪುರಾಣ ಹೇಳುವವರು, ಪುರೋಹಿತರು ಹೀಗೆ ಜಗತ್ತಿನ ಎಲ್ಲರೂ ತಮ್ಮನ್ನು ಯಾರೂ ನೋಡದಿದ್ದಾಗ ಕನ್ನಡಿಯ ಮುಂದೆ ನಿಂತು ತಮ್ಮ ಅಂದ ಚೆಂದಗಳ ನೋಡಿ ಅಭಿಮಾನಪಡುತ್ತಾ, ತಮ್ಮ ಮುಖವನ್ನು ತಾವು ತಿದ್ದಿಕೊಳ್ಳುವವರೇ ಎಲ್ಲ ಎಂದು ಮನುಷ್ಯರ ಸ್ವಭಾವದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Is there is a human being who does not like beauty and happiness? A child, an old man, an accountant, a priest - can any one deny it? When the world is not looking, every one look at the mirror and correct their faces. - Mankutimma
Video Coming Soon
Detailed video explanations by scholars and experts will be available soon.