Back to List

Kagga 441 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ । ಅಂತರಂಗದೊಳೂರಸಂತೆ ಸದ್ದಿಹುದು ॥ ಸಂತೆಯೊಳಮಂತರಂಗದ ಸದ್ದು ಕೇಳಿಪುದು । ಸ್ವಾಂತದಿಕ್ಕೆಲಗಳವು - ಮಂಕುತಿಮ್ಮ ॥ ೪೪೧ ॥

intu horage oLagugaLu bErelOkagaLu alla । antarangadoL Ura sante saddu ihudu ॥ santeyoLu antarangada saddu kELipudu । svAntada ikkelagaLu avu - Mankutimma ॥ 441 ॥

Meaning in Kannada

ಹೀಗೆ ಹೊರಗು ಮತ್ತು ಒಳಗುಗಳೆಲ್ಲ ಬೇರೆ ಬೇರೆ ಅಲ್ಲ. ಅಂತರಂಗದೊಳಗೆ ಹೊರಗಿನ ಜಗದ್ವ್ಯಾಪಾರದ ಸದ್ದು ಮತ್ತು ನಮ್ಮ ಅಂತರಂಗದ ಪ್ರತಿಬಿಂಬದಂತೆ ಜಗದ್ವ್ಯಾಪಾರ. ಒಳಮನಸ್ಸು ಮತ್ತು ಹೊರಜಗತ್ತು ಎರಡೂ ಅಕ್ಕಪಕ್ಕಗಳಲ್ಲಿ ಇರುತ್ತವೆ ಎಂದು ನಮ್ಮ ಮತ್ತು ಈ ಜಗತ್ತಿನ ಸಂಬಂಧದ ಸೂಕ್ಷ್ಮತೆಯನ್ನು ಅರುಹಿದ್ದಾರೆ ನಮಗೆ, ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು .

Meaning & Interpretation

There is no separate inner and outer worlds. The sounds of the outside village can be heard on the inside. The voice of the inner mind can be heard even among the chaos of the outside. The inner and outer worlds are two facets of our mind. - Mankutimma

Themes

Life

Video Section

Video Coming Soon

Detailed video explanations by scholars and experts will be available soon.