Back to List

Kagga 440 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- । ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ॥ ಕೆರಳಿಪುದು ಕರಣಗಳ, ಮರಳಿಪುದು ಹರಣಗಳ । ಹೊರಮೋಹವೊಳದಾಹ - ಮಂಕುತಿಮ್ಮ ॥ ೪೪೦ ॥

horage hoLevondu hoLapina kiraNavu enna edeya oLu । uriyanu ebbisi hogeyanu erachi kaNgaLige ॥ keraLipudu karaNagaLa, maraLipudu haraNagaLa । horamOha oLa dAha - Mankutimma ॥ 440 ॥

Meaning in Kannada

ಹೊರಗಿನ ಆಕರ್ಷಣೆಯ ಹೊಳಪುಗಳು ನಮ್ಮ ಹೃದಯದಲ್ಲಿ ಆಸೆಯನ್ನು ಹುಟ್ಟಿಸಿ ನಮ್ಮ ಇಂದ್ರಿಯಗಳನ್ನು ಕೆರಳಿಸಿ ನಮಗೆ ಶಕ್ತಿಯನ್ನು ನೀಡುತ್ತವೆ. ಹೊರಗಿನ ವಸ್ತುಗಳ ಮೋಹ ಮತ್ತು ಪಡೆದುಕೊಳ್ಳುವ ಒಳಗಿನ ದಾಹದ ಸಹಜ ಪ್ರಕ್ರಿಯೆಯನ್ನು, ಈ ಮುಕ್ತಕದಲ್ಲಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

A shining attraction in the outside world can create a pain in our hearts. It burns it. It clouds our eyes (and judgment). It excites our senses and cheats our simple lives. All this happens because of our inner longing and attachment towards outer entities. - Mankutimma

Themes

LifeSufferingLoveWar

Video Section

Video Coming Soon

Detailed video explanations by scholars and experts will be available soon.