Mankutimmana Kagga by D.V. Gundappa
ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ । ಗಾಳಿಸುಂಟರೆಯನದು ಹರಣಗಳ ಕುಲುಕಿ ॥ ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ । ಧೂಳದರೊಳೀ ಜನ್ಮ - ಮಂಕುತಿಮ್ಮ ॥ ೪೩೯ ॥
ELisuvudondu horasuLivenna hRudayadali । gALisunTareyanadu haraNagaLa kuluki ॥ bALanallaDipudu bErinda tudivarege । dhULadaroLI janma - Mankutimma ॥ 439 ॥
ಹೊರಗೆ ಸುಳಿದಾಡುವ ಯಾವುದೋ ವಿಚಾರ ನಮ್ಮ ಹೃದಯವನ್ನು ಹೊಕ್ಕು ನಮ್ಮ ಮನಸ್ಸು ಬುದ್ಧಿಗಳನ್ನು ಆವರಿಸಿ, ಕಲಕಿ ನಮ್ಮ ಇಡೀ ಜೀವನವನ್ನು ಮೇಲಿಂದ ಕೆಳಗೆ, ಮೊದಲಿಂದ ಅಂತ್ಯದವರೆಗೆ ಅಲ್ಲಾಡಿಸಿ, ತನ್ನ ಅಗಾಧತೆಯನ್ನು ತೋರಿ ನಮ್ಮ ಶಕ್ತಿಯನ್ನು ಕಲಕಿ, ನಮ್ಮ ಬದುಕನ್ನು ಧೂಳೆಬ್ಬಿಸುತ್ತದೆ ಎಂದು ಬದುಕಿನ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There are so many things in this world that effect us. Sometimes, one of them can create a storm in our hearts. That storm can shake your life from root to tip. One may even feel that your whole life is a spec of dust being tossed around in that storm. - Mankutimma [Translator's note: At the end of the day, one must realize that the storm is created *by* us inside *our* hearts and so are capable of controlling it ourselves.]
Video Coming Soon
Detailed video explanations by scholars and experts will be available soon.