Mankutimmana Kagga by D.V. Gundappa
ತಳಿರ ನಸುಕೆಂಪು, ಬಳುಕೆಲೆಯ ಹಸುರಿನ ಸೊಂಪು । ತಿಳಿಮನದ ಯುವಜನದ ನಗುಗಣ್ಣ ಹೊಳಪು ॥ ಬೆಳೆವರಿವು ಮಗುದುಟಿಯಿನುಣ್ಣಿಸುವ ನುಡಿಚಿಗುರು । ಇಳೆಯೊಳಿವನೊಲ್ಲನಾರ್? - ಮಂಕುತಿಮ್ಮ ॥ ೪೩೮ ॥
taLira nasukempu, baLuku eleya hasurina sompu । tiLimanada yuvajanada nagugaNNa hoLapu ॥ beLeva arivu maguduTiyin uNNisuva nudichiguru । iLeyoL ivan ollan Ar? - Mankutimma ॥ 438 ॥
ಕೆಂಪಾದ ಚಿಗುರೆಲೆ, ಹಸಿರಾದ ಹೊಸ ಎಲೆಗಳ ಬಳ್ಳಿಗಳು, ಮುಗ್ದ ಮನಸ್ಸಿನ ಎಳೆಯರ ಅಶಾಭಾವನೆಯ ಕಣ್ಣ ಹೊಳಪು, ಬೆಳೆಯುವ ಮಕ್ಕಳು ಮಾತು ಕಲಿಯುವಾಗ ಆಡುವ ಮೊದಲ ತೊದಲು ನುಡಿಗಳು, ಇವೆಲ್ಲವನ್ನೂ ಬೇಡವೆನ್ನುವ ಮತ್ತು ನೋಡಿ, ಕೇಳಿ ಆನಂದಿಸದ ಮನುಷ್ಯ ಈ ಭೂಮಿಯಮೇಲೆ ಇರಲು ಸಾಧ್ಯವೇ? ಎಂದು ಒಂದು ಪ್ರಶ್ನೆ ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Who in this world can deny being attracted to these - light red tinge of fresh sprout, waving of green leaves to the tune of the wind, bright laughter of young people with pure (light, clear) mind, first words of a baby just coming to grips with the world. These are all God's gift to us and every one loves it. - Mankutimma
Video Coming Soon
Detailed video explanations by scholars and experts will be available soon.