Back to List

Kagga 437 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಶಕ್ತಿ ಕರಣಕ್ಕಿರಲಿ, ರಸ ಸಂಗ್ರಹಣ ಶಕ್ತಿ । ಯುಕ್ತಿವದರೊಡನಿರಲಿ ಭೋಗದಿ ವಿರಕ್ತಿ ॥ ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ । ಉತ್ತಮೋತ್ತಮ ಸುಕೃತಿ - ಮಂಕುತಿಮ್ಮ ॥ ೪೩೭ ॥

shakti karaNakke irali, rasa sangrahaNa shakti । yuktavu adara oDane irali bhOgadi virakti ॥ shakti tanna oLage iddu raktamanan Agadane । uttama uttama sukRuti - Mankutimma ॥ 437 ॥

Meaning in Kannada

ದೇಹದ ಅಂಗಾಂಗಗಳಲ್ಲಿ ಪಟುತ್ವವಿರಬೇಕು, ಜೀವನದ ಸ್ವಾರಸ್ಯವನ್ನು ಗ್ರಹಿಸುವ ಶಕ್ತಿಯಿರಬೇಕು. ಆ ಸ್ವಾರಸ್ಯದಲ್ಲಿ ಆಸಕ್ತಿಯಿದ್ದರೂ ಅದನ್ನು ಭೋಗಿಸುವುದರಲ್ಲಿ ಆಸಕ್ತಿಯಿಲ್ಲದೆ, ವಿರಕ್ತರಾಗಿರಬೇಕು. ವ್ಯಕ್ತಿ, ವಸ್ತು, ವಿಷಯಗಳನ್ನು ನೋಡುವ, ಸ್ವಾರಸ್ಯವನ್ನು ಗ್ರಹಿಸುವ, ಅನುಭವಿಸುವ ಶಕ್ತಿ ಇದ್ದಾಗ್ಯೂ, ಸ್ವಯಂ ಪ್ರೇರಣೆಯಿಂದ ನಿಗ್ರಹವನ್ನು ಪಾಲಿಸಲು ಆದರೆ, ಆದೇ ಉತ್ತಮೋತ್ತಮವಾದ ಮಾರ್ಗವೆಂದು, ವಿರಕ್ತಿಯ ನಿಜಸ್ವರೂಪವನ್ನು ಅನಾವರಣಮಾಡಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

Meaning & Interpretation

Let the senses have the strength to extract flavors of the world. Along with it, let there be aversion towards indulgence. It is the best of the best to be both powerful and not let the power get to one's head. (be levelheaded) - Mankutimma

Themes

LifeWar

Video Section

Video Coming Soon

Detailed video explanations by scholars and experts will be available soon.