Back to List

Kagga 436 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎದೆ ಮಾರುವೋಗದೊಡೆ, ಕಣ್ ಸೊಬಗನುಂಡರೇಂ? । ಹೃದಯ ಮುಯ್ ಕೇಳದೊಡೆ, ನೆಲವ ಸೂಸಿದರೇಂ? ॥ ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇಂ? । ಮುದ ತಾನೆ ತಪ್ಪಲ್ಲ - ಮಂಕುತಿಮ್ಮ ॥ ೪೩೬ ॥

ede mAruvOgada oDe, kaN sobaganu unDare Em? । hRudaya muy kELada oDe, nelava sUsidare Em? ॥ kadaDade irdoDe manava, tanu sogava savidoDe Em? । muda tAne tappalla - Mankutimma ॥ 436 ॥

Meaning in Kannada

ಸುಖಪಡುವುದು ತಪ್ಪಲ್ಲ. ಒಂದು ಸುಂದರ ವಸ್ತುವನ್ನು ನೋಡಿದಾಗ ಹೃದಯ ತದನುಸಾರವಾಗಿ ಮಿಡಿಯದಿದ್ದರೆ ಏನು ಪ್ರಯೋಜನ? ಪ್ರೀತಿ ತೋರಿದ ಹೃದಯ ಮರು ಪ್ರೀತಿಯನ್ನು ಅಪೇಕ್ಷಿಸದಿದ್ದರೆ ಏನು ಪ್ರಯೊಜನ? ದೇಹವು ಏನನ್ನಾದರೂ ಪಡೆದು ಸಂತೋಷಪಟ್ಟಾಗ ಮನಸ್ಸೂ ಸಹ ಆನಂದಿಸಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಹೀಗೆ ಮನಸ್ಸು, ಹೃದಯ ಮತ್ತು ದೇಹಗಳ ಪರಸ್ಪರ ಸ್ಪಂದನೆಗಳ ಬಗ್ಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಪ್ರಸ್ತಾಪಮಾಡಿದ್ದಾರೆ.

Meaning & Interpretation

If the heart does not feel, it is no use of just eyes enjoying the sight. Is it? If the heart does not reciprocate, is there is any use of extending friendship? If the mind is not excited, is bodily pleasure any good? There is no harm in enjoying. But when we do enjoy, we must remember when it is in good taste and when not. - Mankutimma

Themes

DeathMoralitySocietyLove

Video Section

Video Coming Soon

Detailed video explanations by scholars and experts will be available soon.