Back to List

Kagga 430 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ । ಇಬ್ಬರಾಗುವೆನೆಂದನಂತೆ ಪರಬೊಮ್ಮಂ ॥ ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? । ತಬ್ಬಿಕೊಳೊ ವಿಶ್ವವನು - ಮಂಕುತಿಮ್ಮ ॥ ೪೩೦ ॥

obbanu uNuva UTadali saviyilla sogavilla । ibbaru Aguvenu endanante parabommam ॥ hebbadukanu onTitanadoLu adEnu badukuveyo? । tabbikoLo vishvavanu - Mankutimma ॥ 430 ॥

Meaning in Kannada

ಆ ಪರಮಾತ್ಮ ತಾನು ಒಬ್ಬನೇ ಕುಳಿತು ಊಟ ಮಾಡುವುದರಲ್ಲಿ ಏಕೋ ರುಚಿಯಿಲ್ಲ ಮತ್ತು ಸೊಗಸೂ ಇಲ್ಲ ಎಂದು ನೆನೆದು ‘ಇಬ್ಬರಾಗುವೆ’ ಎಂದನಂತೆ. ಸಕಲ ಚರಾಚರಗಳಿಗೆ ಒಡೆಯನಾದ ಅವನಿಗೇ ಹಾಗನ್ನಿಸಿರುವಾಗ, ಇಷ್ಟು ದೊಡ್ಡದಾದ ಬದುಕನ್ನು ನೀನು ಒಂಟಿಯಾಗಿ ಹೇಗೆ ಬದುಕುವೆ? ಹಾಗಾಗಿ ಇಡೀ ವಿಶ್ವವನ್ನೇ ತಬ್ಬಿಕೊಳ್ಳು ಎಂದು ಅದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

When one eats alone, he can neither enjoy nor does it taste good. So, God thought about becoming two (created one more of himself). He kept on doing it and created this world. When even God could not stand being alone, why should man do so? Life is large and world is huge. Embrace it wholeheartedly. - Mankutimma

Themes

DevotionLifeMoralitySelfLove

Video Section

Video Coming Soon

Detailed video explanations by scholars and experts will be available soon.