Back to List

Kagga 431 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ । ವಲಯವಲಯಗಳಾಗಿ ಸಾರುವುದು ದಡಕೆ ॥ ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು । ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ ॥ ೪೩೧ ॥

koLadi nIm mIvandu tereyeddu haraDutte । valayavalayagaLAgi sAruvudu daDake ॥ alegaLA teradi ninnAtmadim pariparidu । kaletukoLLali jagadi - Mankutimma ॥ 431 ॥

Meaning in Kannada

ನಾವು ಕೊಳದಲ್ಲಿ ಸ್ನಾನಮಾಡಲು ಹೋಗಿ ಮುಳುಗೆದ್ದಾಗ ನೀರ ಉಂಗುರಗಳು ನಮ್ಮ ಸುತ್ತಲೂ ಹರಡಿ ದಡವ ತಲುಪುವಂತೆ, ನಾವು ನಮ್ಮ ಚೈತನ್ಯದಿಂದ ಸುಭಾವವನ್ನು ಹರಿಸಿ ಜಗತ್ತಿನಲ್ಲೆಲ್ಲ ಕಲೆತುಕೊಳ್ಳುವಂತೆ ಬಾಳಬೇಕು ಮತ್ತು ಹಾಗೆಯೇ ಬದುಕಿನ ದಡ ಸೇರಬೇಕೆಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

When one get down into a pond to take bath, you can see ripples emanating with you as center. The waves expand all the way to the banks. Just like that your actions create ripples in this world. We should make positive influences around us and expand our influence so that we feel one with the world. - Mankutimma

Themes

Life

Video Section

Video Coming Soon

Detailed video explanations by scholars and experts will be available soon.