Back to List

Kagga 429 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಂಧನವದೇನಲ್ಲ ಜೀವಜೀವಪ್ರೇಮ । ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ ॥ ದಂದುಗವನ್ ಅರಗೆಯ್ದು, ಸಂತಸವನಿಮ್ಮಡಿಪ । ಬಾಂಧವ್ಯ ದೈವಕೃಪೆ - ಮಂಕುತಿಮ್ಮ ॥ ೪೨೯ ॥

bandhanavadEnalla jIvajIvaprEma । onde nile jIvavu are, beretu araLe pUrNa ॥ dandugavan aregeydu, santasavanimmaDipa । bAndhavya daivakRupe - Mankutimma ॥ 429 ॥

Meaning in Kannada

ಒಂದು ಜೀವಕ್ಕೂ ಮತ್ತೊಂದು ಜೀವಕ್ಕೂ ಇರುವ ಪ್ರೇಮವೇನೂ ತೊಂದರೆ ಎನ್ನುವರ್ಥದಲ್ಲಿಬಂಧನವಲ್ಲ. ಜೀವಒಂದೇ ಇದ್ದರೆ ಜೀವನವು ಅರ್ಧವಾಗಿರುತ್ತದೆ. ಅಲ್ಲದೆ, ಇನ್ನೊಂದು ಜೀವದೊಡನೆ ಬೆರೆತು ಬಾಂಧವ್ಯ ಅರಳಿದರೆ, ಬದುಕು ಪರಿಪೂರ್ಣವಾಗುವುದು. ಬದುಕಿನಲ್ಲಿ ಸಂದ ಕಷ್ಟದ ಕೋಟಲೆಯನ್ನು ಮತ್ತೊಂದು ಜೀವದೊಡನೆ ಸಮನಾಗಿ ಹಂಚಿಕೊಂಡಾಗ ಕಷ್ಟವು ಅರ್ಧವಾಗಿಸಂತಸವು ಎರಡುಪಟ್ಟಾಗುತ್ತದೆ. ಈ ಬದುಕಿನ ಬಾಂಧವ್ಯಗಳು ನಮಗೆ ಕೇವಲ ದೈವ ಕೃಪೆಯಿಂದ ಬರುವಂತಹುದು ಎಂದು ಜೀವ ಜೀವಗಳ ಪರಸ್ಪರ ಬಾಂಧವ್ಯಗಳನ್ನುವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತದಲ್ಲಿ.

Meaning & Interpretation

Love between people is not a bondage. If you stand alone, you are a mere half. If you connect and stand together, then you bloom. This love reduces the troubles by half and doubles the happiness. Such a love is God's gift to us. - Mankutimma

Themes

DevotionSufferingSocietyLove

Video Section

Video Coming Soon

Detailed video explanations by scholars and experts will be available soon.