Back to List

Kagga 428 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪ್ರೇಮ ಕನಲೆ ಪಿಶಾಚಿ, ತೃಪ್ತಿಯಾಂತಿರೆ ಲಕ್ಷ್ಮಿ । ಭ್ರಾಮಿಪುದದು ಪ್ರತಿಪ್ರೇಮಯಾಚನೆಯೊಳ್ ॥ ಮಾಮಕವಿದೆಂದಾವುದಕೊ ತಾನೆ ಬಲಿವೋಗಿ । ಶಾಮನವನೊಂದುವುದು - ಮಂಕುತಿಮ್ಮ ॥ ೪೨೮ ॥

prEma kanale pishAchi, tRuptiyAntire lakshmi । bhrAmipudadu pratiprEmayAchaneyoL ॥ mAmakavu idu endu AvudakO tAne balavOgi । shAmanavanu honduvudu - Mankutimma ॥ 428 ॥

Meaning in Kannada

ಪ್ರೇಮವು ಕೆರಳಿದರೆ ಅದು ತೃಪ್ತಿಯಾಗುವ ತನಕ ಮನಸ್ಸು ಪಿಶಾಚಿಯಂತೆ ಆಡುತ್ತದೆ. ಬಯಸಿದ ವಸ್ತು ಸಿಕ್ಕಿಬಿಟ್ಟರೆ ಸಂತಸಗೊಳ್ಳುತ್ತದೆ. ಪ್ರತಿಬಾರಿ ಪ್ರೇಮವುಕ್ಕಿದಾಗಲೂ ಮನಸ್ಸು ಒಂದು ಭ್ರಮೆಯಲ್ಲಿರುತ್ತದೆ. ತನ್ನದು ಎನ್ನುವ ವಸ್ತುವಿಗೆ ಪ್ರೇಮದಲಿ ಬಲಿಯಾಗಿ ಆ ವಸ್ತುವನ್ನು ಪಡೆದು ಮನಸ್ಸು ಶಮನಗೊಳ್ಳುತ್ತದೆ, ಎಂದು ಮಾರ್ಮಿಕವಾಗಿ ನಮ್ಮ ಆಸೆಗಳ, ಪ್ರೇತಿ, ಪ್ರೇಮಗಳನ್ನು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Love is two faced. If it is irritated, it becomes a demon. If it is satisfied, it is as peaceful as Lakshmi. It wanders about looking for someone who can return love. Love alone has the ability to do the supreme sacrifice of offering oneself to someone else. It attains peace thereby. - Mankutimma

Themes

SelfLovePeace

Video Section

Video Coming Soon

Detailed video explanations by scholars and experts will be available soon.