Back to List

Kagga 427 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ । ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ ॥ ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ । ಪ್ರೀತಿಯ ಹುಚ್ಚು ಚಟ - ಮಂಕುತಿಮ್ಮ ॥ ೪೨೭ ॥

mAtevolo pitanavolo patiyavolo satiyavolo । bhrAtasutasakharavolo pAtravondake tAm ॥ kAtarisuta ihudu tanna ellavanu mudupukuDe । prItiya huchchu chaTa - Mankutimma ॥ 427 ॥

Meaning in Kannada

ಮನುಷ್ಯ ತನ್ನದನ್ನು ಪರರಿಗೆ ಕೊಡಲು ಮತ್ತು ಪರರಿಂದ ಏನಾದರೂ ಪಡೆಯಲು ಪ್ರೀತಿ ಪ್ರೇಮಗಳ ಸಹಾಯವನ್ನು ಪಡೆದುಕೊಳ್ಳುತ್ತಾನೆ. ಹಾಗೆ ಕೊಡಲು ಅಥವಾ ಪಡೆದುಕೊಳ್ಳಲು ಅವನು ತಾಯಿಯ, ತಂದೆಯ ಪತಿಯ , ಪತ್ನಿಯ, ಸ್ನೇಹಿತನ, ಅಣ್ಣ-ತಮ್ಮಂದಿರ ಅಥವಾ ಅಕ್ಕತಂಗಿಯರ ಪಾತ್ರವನ್ನು ವಹಿಸುತ್ತಾನೆ(ಳೆ). ಪ್ರೀತಿ ತೋರುವುದು ಮನುಷ್ಯನಿಗೊಂದು ಚಟ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Everyone is bit by this love bug. Its an addiction. They want to show their love to others - as a mother, as a father, as a husband, as a wife, as a brother, as a son or as a friend. - Mankutimma

Themes

DeathSocietyLove

Video Section

Video Coming Soon

Detailed video explanations by scholars and experts will be available soon.