Back to List

Kagga 426 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನುಜರೂಪದಿನಾದರವನು ಪಡೆಯದ ಹೃದಯ- । ವನುರಾಗವನು ಬಿಡಾಲಕೊ ಶುಕಕೊ ಕಪಿಗೊ ॥ ಶುನಕಕೋ ಸುರಿದದರ ಮಾರ್ದನಿಯನಾಲಿಪುದು । ತಣಿವು ಜೀವಸ್ವರದೆ - ಮಂಕುತಿಮ್ಮ ॥ ೪೨೬ ॥

manujarUpadin Adaravanu paDeyada hRudayavu । anurAgavanu biDAlako shukako kapigo ॥ shunakakO suridu adara mArdaniyan Alipudu । taNivu jIvasvarade - Mankutimma ॥ 426 ॥

Meaning in Kannada

ಹಾಗೆ ಮತ್ತೊಂದು ಜೀವಿಯಿಂದ ಮಾನುಷ ಪ್ರೀತಿಗೆ ಹಾತೊರೆಯುವವನಿಗೆ, ಅನ್ಯ ಮನುಷ್ಯರಿಂದ ಆದರ ಪ್ರೀತಿಗಳು ಲಭ್ಯವಾಗದಿದ್ದಲ್ಲಿ, ಆ ಪ್ರೀತಿಯನ್ನು ಅವನು ತಾನು ಸಾಕಿದ ಬೆಕ್ಕಿಗೋ, ಗಿಣಿಗೋ,ಕೋತಿಗೋ ಅಥವಾ ನಾಯಿಗೋ ತೋರಿದ್ದಲ್ಲಿ ಆ ಪ್ರಾಣಿಗಳು ಪ್ರೀತಿಯ ಪ್ರತಿಕ್ರಿಯೆ ನೀಡಿದಾಗ, ಮತ್ತೊಂದು ಜೀವ ಸ್ವರವನ್ನು ಆಲಿಸಿ ಈ ಜೀವವೂ ಸಾಂತ್ವನವನ್ನು ಪಡೆಯುತ್ತದೆ ಎಂದು ಜೀವ ಜೀವಕ್ಕಿರುವ ಪರಸ್ಪರ ಪ್ರೀತಿಯ ಸ್ಪಂದನದ ವಿಷಯವನ್ನು ಮಾನ್ಯ ಗುಂಡಪ್ಪನವರು ನಮಗರುಹಿದ್ದಾರೆ ಈ ಮುಕ್ತಕದಲ್ಲಿ.

Meaning & Interpretation

When a person does not get enough love he diverts all his love towards a cat, a parrot, a monkey or a dog. He listens to the sounds they make and finds solace in it. Everyone longs to be spoken to - at least by pets. - Mankutimma

Themes

LoveWar

Video Section

Video Coming Soon

Detailed video explanations by scholars and experts will be available soon.