Mankutimmana Kagga by D.V. Gundappa
ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ । ಮರುನುಡಿಯ ನುಡಿವನೇನ್ ಒಡಲ ತೋರದನು? ॥ ಪರಿತಪಿಸುವುದು ಜೀವ ಜೀವಸರಸವನೆಳಸಿ । ನರಧರ್ಮಸೂಕ್ಷ್ಮವಿದು - ಮಂಕುತಿಮ್ಮ ॥ ೪೨೫ ॥
harige ninna anurAgavellavanu sallisene । marunuDiya nuDivanEn oDala tOradanu? ॥ paritapisuvudu jIva jIvasarasavaneLAsi । naradharmasUkshmavidu - Mankutimma ॥ 425 ॥
ಆ ‘ಹರಿ’ ಗೆ ನಿನ್ನ ಪ್ರೀತಿಪೂರ್ವಕವಾದ ಭಕ್ತಿಯನ್ನು ಸಲ್ಲಿಸು! ಎಂದರೆ, ತನ್ನ ರೂಪವನ್ನೇತೋರದಅವನು ಪ್ರತ್ಯುತ್ತರನೀಡುವನೇನು? ಈ ಜಗತ್ತಿನಲ್ಲಿ ಜನಿಸಿದ ಜೀವ ಪ್ರತಿಸ್ಪಂದಿಸುವ ಮತ್ತೊಂದು ಜೀವವನ್ನು ಸೇರಲು, ಪ್ರೀತಿ ತೋರಲು, ಸರಸವಾಡಲು, ಹಾತೊರೆಯುವುದು. ಇದು ನರರ ಸ್ವಭಾವದ ಸೂಕ್ಷ್ಮವು, ಎಂದು ಮನುಷ್ಯನ ಪರಸ್ಪರ ಆಕರ್ಷಣೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
It is often asked of us to devote all our love to Him (God). But how is that easy? He has not shown himself ever. He has not spoken to us. Human beings always find it easy to love those and long for whom they can see and connect to. - Mankutimma
Video Coming Soon
Detailed video explanations by scholars and experts will be available soon.