Mankutimmana Kagga by D.V. Gundappa
ಕಾರಿರುಳೊಳಾಗಸದಿ ತಾರೆ ನೂರಿದ್ದೇನು? । ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ॥ ದೂರದಾ ದೈವವಂತಿರಲಿ, ಮಾನುಷಸಖನ । ಕೋರುವುದು ಬಡಜೀವ - ಮಂಕುತಿಮ್ಮ ॥ ೪೨೪ ॥
kAriruLoLu Agasadi tAre nUriddEnu? । dArigana kaNge bEkondu manebeLaku ॥ dUradA daivavantirali, mAnuShasakhana । kOruvudu baDajIva - Mankutimma ॥ 424 ॥
ಕಗ್ಗತ್ತಲ ರಾತ್ರಿಯಲ್ಲಿ ದಾರಿಗನಿಗೆ ದಾರಿತೋರಲು, ಆಕಾಶದಲ್ಲಿ ನೂರಾರು ನಕ್ಷತ್ರಗಳಿದ್ದರೇನು? ಅವು ಅವನಿಗೆ ದಾರಿಯನ್ನು ತೋರಲು ಸಾಧ್ಯವೇ? ಆದರೆ ದಾರಿಯಲ್ಲಿರುವ ಯಾವುದೋ ಮನೆಯ ಬೆಳಕು ಅವನಿಗೆ ದಾರಿ ತೋರುತ್ತದೆ. ಹಾಗೆಯೇ ನಾವು ಕಾಣದ, ನಮ್ಮಿಂದ ಬಹಳ ದೂರದಲ್ಲಿರುವ ಮತ್ತು ಕಷ್ಟಸಾಧ್ಯನಾದ ಆ ದೈವಕ್ಕಿಂತ, ನಮ್ಮ ಪಕ್ಕದಲ್ಲಿ ನಿಂತು ‘ನಿನಗೆ ನಾನಿದ್ದೇನೆ’ ಎನ್ನುವಂತಹ ಒಬ್ಬ ಮಾನವನ ಸ್ನೇಹವನ್ನು ಕೋರುತ್ತದೆ ಮಾನವ ಜೀವ ಎಂದು ಮನುಷ್ಯನ ಆಕಾಂಕ್ಷೆಗಳ ಬಗ್ಗೆ ಬರೆಯುತ್ತಾರೆ ಮಾನ್ಯ ಗುಂಡಪ್ಪನವರು.
In a dark night when the sky is dark, what is the use of a hundreds of stars? A traveler will seek not the light from stars, but the light from a home where he can be safe. Let us have faith in a God who is far away. But for day-to-day counseling one needs a friend. That's all the poor soul is asking for. - Mankutimma
Video Coming Soon
Detailed video explanations by scholars and experts will be available soon.