Mankutimmana Kagga by D.V. Gundappa
ಭಾವರಾಗೋದ್ರೇಕ ತಾನೆ ತಪ್ಪೇನಲ್ಲ । ಧೀವಿವೇಕದ ಸಮತೆಯದರಿನದಿರದಿರೆ ॥ ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ । ಪಾವನವೊ ಹೃನ್ಮಥನ - ಮಂಕುತಿಮ್ಮ ॥ ೪೨೩ ॥
bhAvarAga udrEka tAne tappEnalla । dhIvivEkada samateyu adarin adiradire ॥ sva avidyeyA mOha mamateyadanu anTadire । pAvanavo hRunmathana - Mankutimma ॥ 423 ॥
ಭಾವುಕತೆ,ಕೋಪ,ಉದ್ರೇಕ ಮುಂತಾದ ಭಾವಗಳು ಇರಲಿ ತಪ್ಪೇನಿಲ್ಲ. ಆದರೆ ಆ ಭಾವ ಉತ್ಕಟತೆ ಬುದ್ಧಿಯ ಸಮತೋಲನವನ್ನು ವಿಚಲಿತಗೊಳಿಸಿ ಕದಡದೆ ಇದ್ದರೆ ಅಷ್ಟೇ ಸಾಕು. ಮನಸ್ಸಿನಲ್ಲಿ ನಡೆಯುವ ಎಲ್ಲ ವ್ಯಾಪಾರವೂ ಸಹಜವಾಗಿ ಇರಲಿ ಆದರೆ ನಾವು ಈ ಜಗತ್ತಿನಲ್ಲಿ ಕಲಿತ ವಿದ್ಯೆ ಮತ್ತು ಅಂಟಿಸಿಕೊಂಡ ವ್ಯಾಮೋಹ ಮತ್ತು ಮಮಕಾರಗಳ ಮನೋವ್ಯಾಪಾರದ ಮೇಲೆ ತನ್ನ ಪ್ರಭಾವ ಬೀರದೆ ಇದ್ದರೆ ಮನಸ್ಸು ಬುದ್ಧಿಗಳು ಶುದ್ಧವಾಗಿರುತ್ತವೆ, ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.
It is not wrong to succumb to feelings and emotions. But one must not lose the balance of wisdom and intellect. If the feelings are pure and free from innate ignorance, attachment and love then they will cleanse your heart. - Mankutimma
Video Coming Soon
Detailed video explanations by scholars and experts will be available soon.