Mankutimmana Kagga by D.V. Gundappa
ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ । ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ॥ ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ । ದಿನದ ಸೊಗಸಿಮ್ಮಡಿಯೊ - ಮಂಕುತಿಮ್ಮ ॥ ೪೨೨ ॥
anurAgadukhangaLu ommomme birubIsi । manadi teregaLa kuluki kaDeyuvudum oLitu ॥ ghana varSha birugALi baDiyaliruLoL nelana । dinada sogasimmaDiyo - Mankutimma ॥ 422 ॥
ರಾತ್ರಿಯಲ್ಲಾ ಘನವಾದ ಮಳೆ ಸುರಿದು ಮುಂಜಾನೆ ಮಳೆ ನಿಂತ ನಂತರದ ಬೆಳಗು ಎಷ್ಟು ಆಹ್ಲಾದಕರವಾಗಿರುವ ರೀತಿ, ಮನಸ್ಸಿನಲ್ಲಿ ಅಡಗಿ ಕುಳಿತ ಅನುರಾಗ, ಪ್ರೀತಿ, ಕೋಪ, ದುಗುಡ, ದುಃಖಗಳಂತಹ ಭಾವಗಳು ಹೃದಯದಲ್ಲೇ ಮಂಥನವಾಗಿ ಒಮ್ಮೊಮ್ಮೆ ಹೊಮ್ಮಿ ಹೊರ ಬಂದರೆ ಒಳ್ಳೆಯದು. ಏಕೆಂದರೆ ಅದು ಹೊರಬಂದ ನಂತರ ಮನಸ್ಸು ನಿರಾಳವಾಗುತ್ತದೆ ಎನ್ನುವ ಅರ್ಥವನ್ನು ಈ ಮುಕ್ತಕದಲ್ಲಿ ನಮಗೆ ಕೊಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
Love and disappointment sometimes create a storm in our minds and disturb our peace. It is good. When it pours all night with strong winds, the following morning will be bright and pleasant - Mankutimma
Video Coming Soon
Detailed video explanations by scholars and experts will be available soon.