Back to List

Kagga 421 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ? । ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ॥ ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು । ಗಣಿಸಬೇಡದನು ನೀಂ - ಮಂಕುತಿಮ್ಮ ॥ ೪೨೧ ॥

tanubhava vyAmOha musukitA vyAsanam? । janipudadu prakRutitantrade hRudayataladoL ॥ kShaNamAtramAnumadu kaNNIra barisuvudu । gaNisabEDadanu nIm - Mankutimma ॥ 421 ॥

Meaning in Kannada

ಮಹಾನ್ ಜ್ಞಾನಿ ವ್ಯಾಸನನ್ನೂ ಪುತ್ರ ವ್ಯಾಮೋಹ ಬಿಡಲಿಲ್ಲ. ಈ ವ್ಯಾಮೋಹ ಎನ್ನುವುದು ಪ್ರಕೃತಿಯಿಂದ ಸಹಜವಾಗಿ ಹೃದಯಾಂತರಾಳಕ್ಕೆ ಬಂದು, ಎಂತಹ ಗಟ್ಟಿ ಮನುಷ್ಯನಿಗೂ, ಆ ಕ್ಷಣಕ್ಕೆ ಕಣ್ಣೀರ ತರಿಸುತ್ತದೆ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡ ಎಂದು ಒಂದು ಉಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Who is able to escape the attachment towards their children? Even the omniscient sage Vyasa could not control himself when his son was separated from him. The attachment takes birth in one's heart naturally. It brings tears to one's eyes as soon as there is separation. One must not take these feelings too strongly. - Mankutimma

Themes

LifeSelfLoveWar

Video Section

Video Coming Soon

Detailed video explanations by scholars and experts will be available soon.