Mankutimmana Kagga by D.V. Gundappa
ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತೆಗೊಳಬೇಡ । ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ॥ ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? । ದಿಕ್ಕುವರಿಗವರವರೆ - ಮಂಕುತಿಮ್ಮ ॥ ೪೨೦ ॥
makkaLa bhaviShyakke kakkulitegoLabEDa । pakkAguvudu bhAgyaventento jagadi ॥ dakkitEm kurupAnDutanayarge rAjyasukha? । dikku avarige avaravare - Mankutimma ॥ 420 ॥
ಕೌರವರಿಗೂ ಪಾಂಡವರಿಗೂ ರಾಜ್ಯಸುಖ ಸಿಗಲೇ ಇಲ್ಲ.ಅವರವರು ಪಡೆದುಕೊಂಡು ಬಂದ ಭಾಗ್ಯ ಅವರವರಿಗೆ ಜಗತ್ತಿನಲ್ಲಿ ಖಂಡಿತ ಸಿಗುತ್ತದೆ. ಹಾಗಾಗಿ, ಮಕ್ಕಳ ಭವಿಷ್ಯವ ಕುರಿತು ಅತಿಯಾದ ಅಕ್ಕರೆ, ಅಪೇಕ್ಷೆ ಪಡಬೇಡ. ಅವರವರ ದಿಕ್ಕು ಅವರವರಿಗೆ ಇರುತ್ತದೆ ಎಂದು ಮಕ್ಕಳ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸುವ ಮಕ್ಕಳ ತಂದೆ ತಾಯಂದಿರಿಗೆ ಒಂದು ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Don't be worried about the children's future. Fate will bring strange things beyond your control into their lives. Were the children of either Pandu or Kuru (Kaurava and brothers) able to enjoy the kingdom in peace? Each one will find his own way. - Mankutimma
Video Coming Soon
Detailed video explanations by scholars and experts will be available soon.