Mankutimmana Kagga by D.V. Gundappa
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ । ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ॥ ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು । ಇಳೆಯೊಳಗದೊಂದು ಸೊಗ - ಮಂಕುತಿಮ್ಮ ॥ ೪೧೯ ॥
eLeya taru dinadinavu hosataLira taLevante । tiLinIru chilumeyali niladukkuvante ॥ eLe makkaLoLu tiLivu moLetu beLEvudu nODu । iLeyoLage adondu soga - Mankutimma ॥ 419 ॥
ಒಂದು ಚಿಕ್ಕ ಗಿಡ ಪ್ರತಿನಿತ್ಯ ಹೊಸ ಚಿಗುರನ್ನು ತಳೆವಂತೆ, ಭೂಮಿಯಲ್ಲಿರುವ ನೀರ ಚಿಲುಮೆಯಲ್ಲಿ ನಿಲ್ಲದೆ ತಿಳಿನೀರುಕ್ಕುವಂತೆ, ಎಳೆಯ ಮಕ್ಕಳಲ್ಲಿ ಪ್ರತಿನಿತ್ಯ ಹೊಸತನ್ನು ಅರಿತುಕೊಳ್ಳುವಿಕೆ ನಿರಂತರವಾಗಿ ನಡೆದೇ ಇರುತ್ತದೆ. ಈ ನಿರಂತರ ಅರಿತುಕೊಳ್ಳುವಿಕೆ ಈ ಜಗತ್ತಿನಲ್ಲಿ ಬಹಳ ಸೊಗಸಾದ ವಿಚಾರ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
A small plant will sprout new leaves every day. Fresh water flows out of a spring without stopping. Young children become wiser and grow up every day. Watching all this in on this earth is itself fun. - Mankutimma
Video Coming Soon
Detailed video explanations by scholars and experts will be available soon.