Mankutimmana Kagga by D.V. Gundappa
ಆಹ! ಈ ಮೋಹಗಳೊ ನೇಹಗಳೊ ದಾಹಗಳೊ । ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ॥ ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ । ಈ ಹರಿಬದೊಳಗುಟ್ಟೊ? - ಮಂಕುತಿಮ್ಮ ॥ ೪೨ ॥
Aha! ee mOhagaLo nEhagaLo dAhagaLo । Uhipeya sRuSTiyali hRudayam ihudendu? ॥ hOho hAhA endu namma bAy biDusuvude । ee haribada oLaguTTo? - Mankutimma ॥ 42 ॥
ಆಹಾ ಈ ಬಂಧನಗಳು ಸ್ನೇಹಗಳು ಮತ್ತು ಬಯಕೆಗಳು ಇವುಗಳ ಮಧ್ಯೆ ಈ ಜಗತ್ತಿನ ಎಲ್ಲರಲ್ಲೂ ಹೃದಯವಿದೆಯೆಂದು ನೀನು ಅಂದುಕೊಂಡಿದ್ದೀಯಾ. ಪರಸ್ಪರ ಮಾತುಗಳ ಅಟ್ಟಹಾಸದಿಂದ ನಿಮ್ಮನ್ನೂ ಅಂತಹ ಅಟ್ಟಹಾಸಕ್ಕೆ ಪ್ರತಿಕ್ರಿಯಿಸಿಸಿವುದೇ ಈ ಜಗದ್ವ್ಯಾಪಾರದ ಗುಟ್ಟು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
Aha! Do you imagine that this world has space for emotions when you see attachments (love), friendships and yearnings? Or all these feelings only meant for us exclaim "Ho Ho! Ha Ha!" now-and-then. - Mankutimma
Video Coming Soon
Detailed video explanations by scholars and experts will be available soon.