Back to List

Kagga 43 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ । ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ॥ ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ । ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ ॥ ೪೩ ॥

mEle keLagoLage baLi suttalu ettettalum । mUlemUleyali vidyullahariyondu ॥ dhUlikaNa bhUgOLa ravi chandra tAregaLa । chAlipudu biDu koDade - Mankutimma ॥ 43 ॥

Meaning in Kannada

ಪರಮ ಶಕ್ತಿಯ ಉಲ್ಲೇಖ ಈ ಕಗ್ಗದೊಳಗೆ. ಈ ಹಿಂದೆಯೂ ಈ ವಿಷಯದ ಬಗ್ಗೆ ಅವರೂ ಉಲ್ಲೇಖಿಸಿದ್ದಾರೆ, ಮತ್ತೆ ನಾನೂ ಬರೆದಿದ್ದೇನೆ. ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಭೂತವಾದ ಆ ಪರಮ ಶಕ್ತಿಯನ್ನು ಎಲ್ಲ ಸಾಧಕರೂ, ಸಿದ್ಧರೂ, ಸತ್ಪುರುಷರೂ, ಭಕ್ತರೂ ತಮ್ಮ ಭಕ್ತಿ ಪಾರವಶ್ಯದಲ್ಲಿ ಅನುಭವಿಸಿದ್ದಾರೆ. ಮೇಲೆ, ಕೆಳಗೆ, ಒಳಗೆ, ಹತ್ತಿರ, ದೂರ, ಸುತ್ತಲು, ಮತ್ತು ಎತ್ತೆತ್ತಲೂ ಆ ವಿದ್ಯುಲ್ಲಹರಿಯು ಎಲ್ಲವನ್ನು ” ಬಿಡು ಕೊಡದೆ” ಎಂದರೆ ನಿರಂತರವಾಗಿ, ಒಂದು ಕ್ಷಣವೂ ವಿರಾಮವಿಲ್ಲದೇ ನಡೆಸುತ್ತಿದೆ ಎಂದು ಈ ಕಗ್ಗದ ಅಂತರ್ಯ.

Meaning & Interpretation

There is some electrifying force that is causing this incessant movement of things. This force is every where - top, bottom, inside, outside, surrounding everything, nook-and-corner. This force acts on everything from specs of dust to celestial objects - Earth, Sun, Moon and the stars. Wonder what it may be and why it is so? - Mankutimma

Themes

MoralityNature

Video Section

Video Coming Soon

Detailed video explanations by scholars and experts will be available soon.