Back to List

Kagga 414 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಳೆವನಾರ್ ಪೆಣ್ಗಂಡುಗಳನೆಳೆವ ನೂಲುಗಳ? । ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ॥ ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ । ತಿಳಿಯಗೊಡನದ ನಮಗೆ - ಮಂಕುತಿಮ್ಮ ॥ ೪೧೪ ॥

aLevanAr peNganDugaLanu eLeva nUlugaLa? । keLe pagegaLu ellavu ALadali balu toDaku ॥ iLeya RuNagaLa lekkamihudu vidhiyakkaradi । tiLiyagoDanu ada namage - Mankutimma ॥ 414 ॥

Meaning in Kannada

ಹೆಣ್ಣು ಗಂಡುಗಳ ಪರಸ್ಪರ ಸೆಳೆವ ದಾರಗಳನ್ನು ಅಳೆವುದುಯಾರು? ಅದು ಸಾಧ್ಯವಿಲ್ಲ. ಪರಸ್ಪರ ಸ್ನೇಹ ಅಥವಾ ದ್ವೇಷಗಳ ಕಾರಣದ ‘ಆಳ’ ಬಹಳ ಮತ್ತು ಅಬೇಧ್ಯ. ಪ್ರತಿ ಜೀವಿಗೂ ಇರುವ ಈ ಭೂಮಿಯ ಋಣದ ಲೆಕ್ಕವನ್ನು ವಿಧಿ ಸರಿಯಾಗಿ ಬರೆದಿಟ್ಟಿರುತ್ತಾನೆ. ಅದರ ಪ್ರಕಾರ ಎಲ್ಲ ನಡೆಯುತ್ತದೆ. ಆದರೆ ಆ ವಿಧಿ ನಮಗೆ ಅದನ್ನು ತಿಳಿಯಗೊಡಲಾರ ಎಂದು ಮಾನವರ ಪರಸ್ಪರ ಸಂಬಂಧದ ಸೂಕ್ಷ್ಮತೆಯನ್ನು ವಿಶ್ಲೇಷಣೆಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Who is to explain (measure) the bondings that strings a man and woman together? The love, the hatred are feelings that are all confusing at the very depth. One can not be distinguished from another. But, providence will keep a detailed account of all our actions. It simply does not let us know the fact. - Mankutimma

Themes

MoralityLove

Video Section

Video Coming Soon

Detailed video explanations by scholars and experts will be available soon.