Mankutimmana Kagga by D.V. Gundappa
ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ । ಬೆರಕೆಯಲ್ಲರುಮರ್ಧನಾರೀಶನಂತೆ ॥ ನರತೆಯಣು ನಾರಿಯಲಿ ನಾರೀತ್ವ ನರನೊಳಣು । ತಿರಿಚುತಿರುವುದು ಮನವ - ಮಂಕುತಿಮ್ಮ ॥ ೪೧೩ ॥
bariya heN bariya ganDembudu iLeyoLagilla । berakeyallarum ardhanArIshanante ॥ narateyanu nAriyali nArItva naranoLaNu । tirichutiruvudu manava - Mankutimma ॥ 413 ॥
ಸೃಷ್ಟಿಯಲ್ಲಿ ಕೇವಲ ಗಂಡು ಅಥವಾ ಕೇವಲ ಹೆಣ್ಣು ಎನ್ನುವುದಿಲ್ಲ. ಎಲ್ಲರೂ ಅರ್ಧನಾರೀಶ್ವರರಂತೆ ಮಿಶ್ರಗುಣಗಳನ್ನು ಹೊಂದಿದ್ದಾರೆ. ಗಂಡಿನಲ್ಲಿ ಹೆಣ್ಣಿನ ಗುಣಗಳ ಅಣುಗಳೂ ಮತ್ತು ಹೆಣ್ಣಿನಲ್ಲಿ ಗಂಡಿನ ಗುಣಗಳ ಅಣುಗಳೂ ಸೇರಿಕೊಂಡು ಎಲ್ಲರ ಮನಗಳಲ್ಲೂ ಈ ದ್ವಿ ಗುಣಗಳ ಮಿಶ್ರಣವೇ ಇದೆ ಎಂದು ವಿಮರ್ಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
No one in this world is entirely male or entirely female. All of us are like Lord Shiva a mixture of both male and female qualities. There will always be soft woman-like qualities in a man. There will be harsh man-like qualities in every woman. The mix of these qualities twist our mind in various ways. - Mankutimma
Video Coming Soon
Detailed video explanations by scholars and experts will be available soon.