Back to List

Kagga 412 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ । ಗುಣದ ಕೊಳ್ಳುತ ಕೊಡುತ ಪೊನಲು ಮಾರ್ಪಡುಗಂ ॥ ಮನುಜಸಂತಾನದಲಿ ಗುಣದವತರಣವಂತು । ಗುಣಿಪುದೆಂತಾ ತೆರನ - ಮಂಕುತಿಮ್ಮ ॥ ೪೧೨ ॥

janisideDeyim kaDalavaregamaDiyaDi nelada । guNada koLLuta koDuta ponalu mArpaDugam ॥ manujasantAnadali guNadavataraNavantu । guNipudentA terana - Mankutimma ॥ 412 ॥

Meaning in Kannada

ತನ್ನ ಜನ್ಮ ಸ್ಥಾನದಿಂದ ಕಡಲ ಸೇರುವವರೆಗೂ ತಾನು ಹರಿಯುವ ನೆಲದ ಗುಣವನ್ನು ಪಡೆದುಕೊಳ್ಳುತ್ತಾ, ತಾ ಹೊತ್ತು ತಂದದ್ದನ್ನು ಹರಿವೆಡೆಯಲ್ಲ ಕೊಡುತ್ತಾ ತಾನು ಬದಲಾಗುತ್ತಾ ಹರಿವ ‘ನದಿ’ ಯಂತೆ, ಮನುಜಕುಲವೂ ತನ್ನ ಬದುಕಿನ ಪ್ರವಾಹದಲ್ಲಿ ಹಿಂದಿನಿಂದ ತಾನು ಹೊತ್ತು ತಂದು ಗುಣಗಳನ್ನು ಇಲ್ಲಿ ಕೆಲವನ್ನು ಗಳಿಸಿ, ಕೆಲವನ್ನು ಹಂಚಿ, ಕೆಲವನ್ನು ಉಳಿಸಿ, ಕೆಲವನ್ನು ಹೊತ್ತು ಹೋಗುತ್ತಿರುವುದೇ ಅದರ ಗುಣವಾಗಿರುವಾಗ, ಅದನ್ನು ಲೆಕ್ಕಹಾಕುವುದು ಹೇಗೆ ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

A river flows from its birthplace to the sea. All along, it collects qualities of the earth and giving the earth some of its own qualities - forever changing. It is the same with qualities of humanity. They keep changing in every generation. One can not keep count or track of how the changes happen. - Mankutimma

Themes

LifeNature

Video Section

Video Coming Soon

Detailed video explanations by scholars and experts will be available soon.