Mankutimmana Kagga by D.V. Gundappa
ತೆರಪನರಿಯದೆ ಪರಿವ ಕಾಲಪ್ರವಾಹದಲಿ । ಪುರುಷರಚಿತಗಳೆನಿತೊ ತೇಲಿಹೋಗಿಹವು ॥ ಪುರ ರಾಷ್ಟ್ರ ದುರ್ಗಗಳು, ಮತ ನೀತಿ ಯುಕ್ತಿಗಳು । ಪುರುಷತನ ನಿಂತಿಹುದು - ಮಂಕುತಿಮ್ಮ ॥ ೪೧೧ ॥
terapanu ariyade pariva kAlapravAhadali । puruSha rachitagaLenito tElihOgihavu ॥ pura rAShTra durgagaLu, mata nIti yuktigaLu । puruShatana nintihudu - Mankutimma ॥ 411 ॥
ಬಿಡುವಿಲ್ಲದೆ ಅವ್ಯಾಹತ ಹರಿಯುವ ಕಾಲ ಪ್ರವಾಹದಲ್ಲಿ ಮನುಷ್ಯ ರಚಿಸಿದ ರಚನೆಗಳು ಲೆಕ್ಕವಿಲ್ಲದಷ್ಟು ತೇಲಿಹೋಗಿವೆ. ಊರುಗಳು, ರಾಷ್ಟ್ರಗಳು, ಮತಗಳು, ನೀತಿಗಳು, ಯುಕ್ತಿಗಳು ಹೀಗೆ ಎಷ್ಟೋ!!!!. ಪುರುಷನ ರಚಿತವೆಲ್ಲಾ ತೇಲಿಹೋಗಿದ್ದರೂ, ಪುರುಷ ಮತ್ತು ಅವನ ಪುರುಷತನ ಇನ್ನೂ ಹಾಗೆ ನಿಂತಿಹುದು, ಎನ್ನುವುದೇ ಈ ಮುಕ್ತಕದ ಹೂರಣ.
Time flows incessantly. In this flow man made artifacts have all gone floating and drifting - cities, countries, forts, castes, moral constructs, wisdom. Mankind alone stands. - Mankutimma
Video Coming Soon
Detailed video explanations by scholars and experts will be available soon.