Back to List

Kagga 415 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಎಲ್ಲಿಯದನೊ ಅದೆಲ್ಲಿಯದಕೋ ಹೆಣೆಯುವನು । ಒಲ್ಲೆವೆನೆ ನೀವೆ ಕಿತ್ತಾಡಿಕೊಳಿರೆನುವನ್ ॥ ಬೆಲ್ಲದಡುಗೆಯಲಿ ಹಿಡಿ ಮರಳನೆರಚಿರಿಸುವನು । ಒಳ್ಳೆಯುಪಕಾರಿ ವಿಧಿ - ಮಂಕುತಿಮ್ಮ ॥ ೪೧೫ ॥

elliyadano adelliyadakO heNeyuvanu । ollevene nIve kittADikoLirenuvan ॥ belladaDukeyali hiDi maraLanerachirisuvanu । oLLeyupakAri vidhi - Mankutimma ॥ 415 ॥

Meaning in Kannada

ವಿಧಿ, ಎಲ್ಲಿಯೋ ಇರುವುದಕ್ಕೆ ಮತ್ತೆಲ್ಲಿಯೋ ಇರುವುದನ್ನು ನಂಟುಹಾಕಿಸುತ್ತಾನೆ. ನಾವು ಅಕಸ್ಮಾತ್ ವಿಧಿ ಲಿಖಿತವನ್ನು ಧಿಕ್ಕರಿಸಿ, ನಮ್ಮ ಸ್ವಂತ ಬುದ್ಧಿ ಉಪಯೋಗಿಸಿ ಏನೋ ಮಾಡಲು ಹೋಗಿ ಪರದಾಟದಲ್ಲಿ ಸಿಕ್ಕಿಹಾಕಿಕೊಂಡರೆ, ‘ನೀನೇ ಹೋರಾಡಿಕೋ’ ಎಂದು ಸುಮ್ಮನಿರುತ್ತಾನೆ. ನಾವು ಆಸೆಪಟ್ಟದ್ದನ್ನು ಕೆಡಿಸಿ ‘ಸಿಹಿಯಾದ ಪಾಕದಲ್ಲಿ ಮರಳನ್ನು ಎರಚುತ್ತಾನೆ’ ಇವನು ನಮಗೆ ಬಹಳ ಒಳ್ಳೆಯ ಉಪಕಾರಿ ಎಂದು ನಮ್ಮ ಬದುಕುಗಳಲ್ಲಿ ವಿಧಿಯಾಟವನ್ನು ಕುಹಕವಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Providence binds beings from some place to another in a different (far away) place. If people resist, then it will let them both by themselves to fight it out between them. This act of fate has not logic and does not seem to help the people involved. It is like throwing a handful of sand in a sweet dish (mostly sweet, but cannot eat because of the sand). - Mankutimma

Themes

FateSocietyWar

Video Section

Video Coming Soon

Detailed video explanations by scholars and experts will be available soon.