Back to List

Kagga 408 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ । ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ॥ ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ । ನಿಲದಮೃತಧಾರೆ - ಮಂಕುತಿಮ್ಮ ॥ ೪೦೮ ॥

taleyinda talege, pILigeyinda pILigege । aleyindalalege Tappeya chAranante ॥ iLiyutide yugadinda yugake mAnavadharma । niladu amRutadhAre - Mankutimma ॥ 408 ॥

Meaning in Kannada

ಒಂದು ಅಲೆ ಮತ್ತೊಂದು ಅಲೆಗೆ ಕಾರಣವಾಗುವಂತೆ, ಅಂಚೆ ಹಂಚುವವ ತನ್ನ ಕೈಲಿರುವ ಅಂಚೆಯನ್ನು ಹಲವಾರು ಮನೆಗಳಿಗೆ ತಲುಪಿಸುವಂತೆ, ಪ್ರಕೃತಿಯಲ್ಲಿ ಅರಳಿದ ಮನುಷ್ಯ, ತಾನು ರೂಢಿಸಿಕೊಂಡ ವಿಚಾರ, ಅಚಾರ,ಧರ್ಮ,ವಿಜ್ಞಾನ,ಕಲೆ ಮುಂತಾದವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಪೀಳಿಗೆಯಿಂದ ಪೀಳಿಗೆಗೆ, ಹಂಚುತ್ತಾ ‘ಅರಿವಿನ ಮತ್ತು ಜ್ಞಾನದ ಅಮೃತಧಾರೆ’ಯನ್ನು ಮುಂದಿನ ಪೀಳಿಗೆಯ ವಿಚಾರ ಶಕ್ತಿಗೆ ಕಾರಕನಾಗುತ್ತಾನೆ ಎಂಬ ವಿಷಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Head to head (person to person), generation to generation, wave to a wave humanity is passing on information (traditions and customs) just like post man. This is happening since every epoch of time since the beginning. Individuals may perish. But humanity continues like a endless stream of elixir. - Mankutimma

Themes

DeathMorality

Video Section

Video Coming Soon

Detailed video explanations by scholars and experts will be available soon.